

BBK 12 : ಬಿಗ್ಬಾಸ್ ಶೋ ( Bigg Boss Show ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಸಹ ಪಡೆದುಕೊಂಡಿದೆ. ಈ ಶೋ ಆರಂಭವಾದ್ರೆ ಟಿಆರ್ಪಿಯಲ್ಲಿ ದಾಖಲೆಗಳನ್ನೇ ಬರೆಯುತ್ತೆ. ಅಷ್ಟರಮಟ್ಟಿಗೆ ಈ ಶೋ ಮನೆ ಮಾತಾಗಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್ಶಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ. ಈ ಶೋ ಮಾಮೂಲಿಯಂತೆ ಈ ಬಾರಿಯೂ ಕಲರ್ಸ್ ಕನ್ನಡದಲ್ಲಿ ಮೂಡಿ ಬರಲಿದೆ.
ಈಗಾಗಲೇ ಯಶಸ್ವಿ 11 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ಬಾಸ್ ಶೋ 12ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿಯ ಲೋಗೋ ತುಂಬಾ ವಿಶೇಷವಾಗಿದೆ. 12 ನೇ ನಂಬರ್ ಒಳಗೊಂಡಂತೆ ಬಿಗ್ಬಾಸ್ ಕಣ್ಣಿನ ಲೋಗೋ ಡಿಸೈನ್ ಮಾಡಲಾಗಿದ್ದು, ತುಂಬಾ ವಿಶೇಷವಾಗಿದೆ. ಅಲ್ಲದೆ, ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ ಕನ್ನಡ ಕಲರವ ಇರಲಿದೆ. ಏಕೆಂದರೆ, ಇಡೀ ಮನೆಯನ್ನು ಕನ್ನಡ ಸಂಸ್ಕೃತಿ ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿದೆ.
ಅಂದಹಾಗೆ, ಇಡೀ ಕರ್ನಾಟಕ ಕಾಯುತ್ತಿದ್ದ ಸಮಯ ಇದೀಗ ಬಂದಿದೆ. ಅಂದರೆ, ಇಂದಿನಿಂದ ಬಿಗ್ಬಾಸ್ ಸೀಸನ್ 12 ಆರಂಭವಾಗಲಿದೆ. ಇಂದು ಬಿಗ್ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿಕೊಡಲಿದ್ದಾರೆ. ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್ಬಾಸ್ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಅದಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಅವರ ಹೆಸರು ಈ ಕಳಗಿನಂತಿದೆ.
* ಕಾಕ್ರೋಚ್ ಸುಧೀ (ಖಳನಟ)
* ಶ್ರೇಯಸ್ ಕೆ. ಮಂಜು (ನಟ)
* ಜಾಹ್ನವಿ (ನಿರೂಪಕಿ)
* ಧನುಷ್ ಗೌಡ (ಗೀತ ಸೀರಿಯಲ್ ನಾಯಕ)
* ಗಿಲ್ಲಿ (ಹಾಸ್ಯ ನಟ)
* ರಾಶಿಕ ಶೆಟ್ಟಿ (ನಟಿ)
* ಅಶ್ವಿನಿ ಗೌಡ (ಕರವೇ ರಾಜ್ಯ ಘಟಕ ಅಧ್ಯಕ್ಷೆ)
* ಕಾವ್ಯ ಶೈವ (ಕೊತ್ತಲವಾಡಿ ನಟಿ)
* ಸೂರಜ್ (ಕಾಮಿಡಿ ಕಿಲಾಡಿಗಳು)
* ಆರ್. ಜೆ. ಅಮಿತ್
* ಡಾಗ್ ಸತೀಶ್
* ಮಂಜು ಭಾಷಿಣಿ (ಸೀರಿಯಲ್ ನಟಿ)
* ಸ್ಪಂದನ ಸೋಮಣ್ಣ (ನಟಿ)
* ಮೌನ ಗುಡ್ಡೆಮನೆ (ನಟಿ)
* ಅಭಿ (ಕೋಟಿ ಸಿನಿಮಾ ವಿಲನ್)
ಗಮನಿಸಿ: ಈ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂಭಾವ್ಯ ಹೆಸರುಗಳನ್ನು ಆಧರಿಸಿದೆ ಮತ್ತು ಕಲರ್ಸ್ ಕನ್ನಡ ವಾಹಿನಿಯಿಂದ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ. ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ತಿಳಿದುಕೊಳ್ಳಲು ಇಂದು ಸಂಜೆ 6 ಗಂಟೆಯವರೆಗೆ ಕಾಯಬೇಕಿದೆ. ನಿಮ್ಮ ಪ್ರಕಾರ ಯಾರೆಲ್ಲ ಬಿಗ್ಬಾಸ್ ಮನೆಯನ್ನು ಪ್ರವೇಶಿಸಬಹುದು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.