ತಾಳಿ ಹಾಕಲ್ಲ, ಕುಂಕುಮ ಇಡಲ್ಲ ಏಕೆಂದರೆ ನನ್ನ ಗಂಡ... ಭಾರಿ ಚರ್ಚೆಗೀಡಾದ ಮಹಿಳೆಯ ಹೇಳಿಕೆ! Sindoor or Thali

Sindoor or Thali
Published on

Sindoor or Thali : ಮದುವೆ ಎಂಬುದು ಈಗ ಮೊದಲಿನಂತಿಲ್ಲ. ಈ ಹಿಂದೆ, ಹೆಚ್ಚಿನ ಮನೆಗಳಲ್ಲಿ ಗಂಡ ಹಣ ಸಂಪಾದಿಸುವುದನ್ನು ಮತ್ತು ಹೆಂಡತಿ ಮನೆಕೆಲಸ ಮಾಡುವುದನ್ನು ನೋಡಲಾಗುತ್ತಿತ್ತು. ಆದರೆ, ಕಾಲ ಕಳೆದಂತೆ, ದಾಂಪತ್ಯ ಜೀವನದಲ್ಲೂ ಬದಲಾವಣೆಗಳಾಗಿವೆ. ಇಂದು, ಹೆಚ್ಚಿನ ದಂಪತಿ ಪರಸ್ಪರ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ, ಕಂಟೆಂಟ್​ ಕ್ರಿಯೇಟರ್​ ಮತ್ತು ಥೆರಪಿಸ್ಟ್​ ದಿವಿಜಾ ಭಾಸಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಪ್ರಸ್ತುತ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ.

ಈ ವಿಡಿಯೋ ದೊಡ್ಡ ವಿವಾದಕ್ಕೆ ಕಾರಣವಾಗಬಹುದು ಎಂಬ ಹೇಳಿಕೆ ಮೂಲಕವೇ ದಿವಿಜಾ ಅವರು ತಮ್ಮ ಮಾತನ್ನು ಆರಂಭಿಸಿದ್ದಾರೆ. ವಿಡಿಯೋದಲ್ಲಿ ಸಿಂಧೂರ ಅಥವಾ ತಾಳಿಯನ್ನು ಧರಿಸದಿರುವ ಬಗ್ಗೆ ದಿವಿಜಾ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ನಾನು ಅರ್ಜಿಗಳನ್ನು ಭರ್ತಿ ಮಾಡುವಾಗ, ಶ್ರೀಮತಿ ದಿವಿಜಾ ಬದಲಿಗೆ ಮಿಸ್ ದಿವಿಜಾ ಎಂದು ಟಿಕ್ ಮಾಡುತ್ತೇನೆ. ನಾನು ನನ್ನ ಹೆಸರಿನೊಂದಿಗೆ ನನ್ನ ಗಂಡನ ಉಪನಾಮವನ್ನು ಹಾಕುವುದಿಲ್ಲ. ನಾನು ಸಿಂಧೂರ ಅಥವಾ ತಾಳಿಯನ್ನು ಧರಿಸುವುದಿಲ್ಲ. ಏಕೆಂದರೆ, ನನ್ನ ಗಂಡ ಇವುಗಳಲ್ಲಿ ಯಾವುದನ್ನೂ ಧರಿಸುವುದಿಲ್ಲ. ಹಾಗಾದರೆ, ನಾನೇಕೆ ಧರಿಸಬೇಕು? ಬದಲಾಗಿ, ನಾವಿಬ್ಬರೂ ಬ್ರಾಸ್​ಲೆಟ್​ಗಳನ್ನು ಧರಿಸುತ್ತೇವೆ ಎಂದು ದಿವಿಜಾ ಹೇಳಿದ್ದಾರೆ.

ಯಾರೇ ಆಗಲಿ ಮದುವೆ ಆದ ಬಳಿಕ ಬದಲಾಗುವುದಿಲ್ಲ. ಮದುವೆಯ ನಂತರವೂ ಅದೇ ವ್ಯಕ್ತಿಯಾಗಿರುತ್ತೇವೆ. ನನಗೆ ಬೇಕಾದುದನ್ನು ನಾನು ಧರಿಸುತ್ತೇನೆ. ನನಗೆ ಬೇಕಾದುದನ್ನು ನಾನು ಮಾಡುತ್ತೇನೆ. ನಾನು ಆರ್ಥಿಕವಾಗಿ ಸ್ವತಂತ್ರಳು. ಮದುವೆಯ ನಂತರ, ನಾವಿಬ್ಬರೂ ಮನೆ ಬಾಡಿಗೆಗೆ ಪಡೆದಿದ್ದೇವೆ. ನಾವಿಬ್ಬರೂ ನಮ್ಮ ಹೆತ್ತವರನ್ನು ಪ್ರೀತಿಸುತ್ತಿದ್ದರೂ, ಅವರು ನಮ್ಮೊಂದಿಗೆ ವಾಸಿಸುವುದಿಲ್ಲ. ನಾವಿಬ್ಬರೂ ಸಂಪಾದಿಸುವುದರಿಂದ ಮತ್ತು ಅಡುಗೆಯವರನ್ನು ನೇಮಿಸಿಕೊಳ್ಳಲು ಹಣವಿರುವುದರಿಂದ ನಾವು ಹಾಗೆ ಮಾಡುತ್ತೇವೆ. ಇಲ್ಲದಿದ್ದರೆ, ನಾವಿಬ್ಬರೂ ಒಟ್ಟಿಗೆ ಅಡುಗೆ ಮಾಡಲು ಕಲಿಯುತ್ತಿದ್ದೆವು. ಇದ್ಯಾವುದನ್ನೂ ನಂಬದ ವ್ಯಕ್ತಿಯನ್ನು ನಾನು ಮದುವೆಯನ್ನೇ ಆಗುತ್ತಿರಲಿಲ್ಲ. ಮದುವೆಯ ನಂತರ ನನ್ನ ಜೀವನದಲ್ಲಿ ಆಗಿರುವ ಒಂದೇ ಒಂದು ಬದಲಾವಣೆ ಎಂದರೆ ಈಗ ನಾನು ಪ್ರತಿ ರಾತ್ರಿ ನನ್ನ ಗೆಳೆಯನೊಂದಿಗೆ ಮಲಗಬಹುದು.

ನಾನು ಇದನ್ನೆಲ್ಲ ನಿಮಗೆ ಏಕೆ ಹೇಳುತ್ತಿದ್ದೇನೆ ಅಂದರೆ, ಮದುವೆ ಎಂಬುವುದು ಮಹಿಳೆಯ ಎಲ್ಲವನ್ನೂ ಬದಲಾಯಿಸಬೇಕಾದ ಭಯಾನಕ, ನಕಾರಾತ್ಮಕ ಅನುಭವವಾಗಿರಬೇಕಾಗಿಲ್ಲ. ಪುರುಷನು ತನ್ನ ಕುಟುಂಬದೊಂದಿಗೆ ಬದುಕಬಹುದು, ವೃತ್ತಿಜೀವನವನ್ನು ಹೊಂದಬಹುದು ಮತ್ತು ಅವನು ಬಯಸಿದ್ದನ್ನು ಮಾಡಬಹುದು. ಆದರೆ, ಮಹಿಳೆಯರು ಮಾಡಬಾರದಾ? ಮದುವೆ ಎಂಬುದು ಸಮಾನತೆಯ ಬಗ್ಗೆಯೂ ಆಗಿರಬೇಕು. ನಮ್ಮ ಸಮಾಜವು ಅದನ್ನು ಸಮಾನವಾಗಿ ಮಾಡುವುದಿಲ್ಲ. ಅಷ್ಟಕ್ಕೂ ಸಮಾಜವೇನು ಇತರರಿಂದ ಮಾಡಲ್ಪಟ್ಟಿಲ್ಲ. ಅದು ನನ್ನನ್ನು ಒಳಗೊಂಡಿದೆ ಮತ್ತು ನಿಯಮಗಳನ್ನು ಬದಲಾಯಿಸಬೇಕಾದರೆ, ಅದನ್ನು ನಾನೇ ಮಾಡುತ್ತೇನೆ ಎಂದು ಯುವತಿ ಹೇಳಿದ್ದಾಳೆ.

ಸದ್ಯ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೆಲವರು ದಿವಿಜಾಳ ಮನಸ್ಥಿತಿಯನ್ನು ಹೊಗಳಿದರೆ, ಇನ್ನು ಕೆಲವರು ಟೀಕಿಸಿದ್ದಾರೆ. ಸಿಂಧೂರ ಮತ್ತು ಮಾಂಗಲ್ಯ ಸೂತ್ರ ದಬ್ಬಾಳಿಕೆಯ ಸಂಕೇತವಲ್ಲ ಅದು ದೈವಿಕ. ಅದು ನಮ್ಮ ಸಂಸ್ಕೃತಿ ಎಂದಿದ್ದಾರೆ. ಮಹಿಳಾ ಸಬಲೀಕರಣ ಎಂದರೆ ಅವರು ತಮ್ಮ ಬೇರುಗಳು ಮತ್ತು ಸಂಸ್ಕೃತಿಯನ್ನು ಮರೆಯಬೇಕು ಎಂದಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net