ಬಾಲಿವುಡ್​ ಬ್ಯೂಟಿ ಜತೆ ಟೀಮ್​ ಇಂಡಿಯಾ ಸ್ಟಾರ್​ ವೇಗಿ ಸಿರಾಜ್​ ಡೇಟಿಂಗ್​! ಇದು ಸತ್ಯವೇ? Mohammed Siraj

Mohammed Siraj
Published on

Mohammed Siraj : ಟೀಮ್​ ಇಂಡಿಯಾ ಸ್ಟಾರ್​ ವೇಗಿ ಮೊಹಮ್ಮದ್ ಸಿರಾಜ್ ಅವರು ಸಿನಿಮಾ ರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ವದಂತಿ ಮತ್ತೊಮ್ಮೆ ಹರಿದಾಡುತ್ತಿದೆ. ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಅವರ ಮೊಮ್ಮಗಳು ಜನೈ ಭೋಂಸ್ಲೆ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಈ ಹಿಂದೆ ಹರಿದಾಡಿದ್ದವು. ಆದರೆ, ಸಿರಾಜ್ ಆ ವದಂತಿಗಳನ್ನು ನಿರಾಕರಿಸಿದರು. ಅಲ್ಲದೆ, ಆಕೆ ತನಗೆ ಸಹೋದರಿಯಂತೆ ಎಂದು ಹೇಳಿದ್ದರು. ಇದೀಗ ಮತ್ತೊಂದು ವದಂತಿ ಹಡಿದಾಡುತ್ತಿದ್ದು, ಹಿಂದಿ ಬಿಗ್​ಬಾಸ್ ಖ್ಯಾತಿಯ ಮಹಿರಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಮಹಿರಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ, ಸಿರಾಜ್ ಅವರು ಮಹಿರಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ಅನ್ನು ಲೈಕ್​ ಮಾಡಿದ್ದಲ್ಲದೆ, ಅವರನ್ನು ಫಾಲೋ ಮಾಡಿದರು. ಇದರೊಂದಿಗೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ವೈರಲ್ ಆದವು. ಈ ವಿಷಯದ ಬಗ್ಗೆ ಮಹಿರಾ ಶರ್ಮಾ ಇತ್ತೀಚೆಗೆ ಮಾತನಾಡಿದ್ದು, ನಾನು ಸಿರಾಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಸುದ್ದಿ ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ನಾನು ಸಾಮಾಜಿಕ ಜಾಲತಾಣದ ಜೊತೆಗೆ ಚಿತ್ರರಂಗದಲ್ಲಿ ಜನಪ್ರಿಯಳಾಗಿರುವುದರಿಂದ, ನನ್ನ ಬಗ್ಗೆ ಅಂತಹ ಸುದ್ದಿಗಳು ಬರುತ್ತಿವೆ. ಆದರೆ, ಅದ್ಯಾವುದು ನಿಜವಲ್ಲ ಎಂದು ಹೇಳಿದ್ದಾರೆ.

ಜಾಲತಾಣದಲ್ಲಿ ಅನೇಕ ಜನರು ಅಭಿಮಾನಿಗಳ ಹೆಸರಿನಲ್ಲಿ ನನ್ನನ್ನು ಯಾರೊಂದಿಗಾದರೂ ತಳುಕು ಹಾಕಬಹುದು. ಅವರನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ. ನಾವು ಚಿತ್ರರಂಗದಲ್ಲಿ ಅನೇಕ ಜನರೊಂದಿಗೆ ಕೆಲಸ ಮಾಡುತ್ತೇವೆ. ಅಂತಹ ಸಂದರ್ಭಗಳಲ್ಲಿ, ಇಂಥದ್ದನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಫೋಟೋಗಳನ್ನು ಸಹ ಎಡಿಟ್​ ಮಾಡುತ್ತಾರೆ. ಆದರೆ, ನಾನು ಇವೆಲ್ಲಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ, ಇಂತಹ ವದಂತಿಗಳನ್ನು ಯಾರೇ ಮಾಡಿದರೂ ಅದು ತಪ್ಪು ಎಂದು ನಾನು ಹೇಳುತ್ತೇನೆ ಎಂದು ಮಹಿರಾ ಹೇಳಿದರು.

ಮಹಿರಾ ಶರ್ಮಾ ಅವರ ತಾಯಿ ಸಾನಿಯಾ ಶರ್ಮಾ ಕೂಡ ಡೇಟಿಂಗ್ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ಅಂತಹ ವದಂತಿಗಳನ್ನು ಯಾರೂ ನಂಬಬೇಡಿ. ನನ್ನ ಮಗಳ ಬಗ್ಗೆ ಮಾಧ್ಯಮಗಳು ಏನು ಹೇಳುತ್ತಿವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಹೊರಗೆ ಬಹಳಷ್ಟು ಹೇಳುತ್ತಾರೆ. ಅವೆಲ್ಲವೂ ನಿಜವಾಗಿರಬಹುದೇ? ನನ್ನ ಮಗಳು ಸೆಲೆಬ್ರಿಟಿಯಾಗಿದ್ದರಿಂದ ಇಂತಹ ವದಂತಿಗಳು ಮುನ್ನೆಲೆಗೆ ಬರುತ್ತಿವೆ. ಕೆಲವು ಅಭಿಮಾನಿಗಳು ಅಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾರೂ ಅವುಗಳನ್ನು ನಂಬುವ ಅಗತ್ಯವಿಲ್ಲ ಎಂದು ಸಾನಿಯಾ ಶರ್ಮಾ ಹೇಳಿದ್ದಾರೆ.

ಹಿಂದಿ ಟಿವಿ ಧಾರಾವಾಹಿಗಳ ಮೂಲಕ ಮಹಿರಾ ಶರ್ಮಾ ಬಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಬಿಗ್​ಬಾಸ್ 13ರಲ್ಲಿ ಅವಕಾಶ ಪಡೆದ ನಂತರ ಇನ್ನಷ್ಟು ಪ್ರಸಿದ್ಧರಾದರು. ವೆಬ್ ಸರಣಿಗಳಲ್ಲಿ ಅವಕಾಶಗಳು ಸಿಕ್ಕ ಬಳಿಕ ಇನ್ನಷ್ಟು ಜನಪ್ರಿಯರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net