ನಿಮ್ಮ ಸುತ್ತಮುತ್ತ ಈ ಘಟನೆಗಳು ನಡೆದರೆ ನಿಮಗೆ ಕೆಟ್ಟ ಸಮಯ ಶುರುವಾಗಿದೆ ಎಂದರ್ಥ! Bad Times

Bad Times

Bad Times : ಸಾಮಾನ್ಯವಾಗಿ ಎಲ್ಲರೂ ತಮ್ಮ ಜೀವನ ಶ್ರೀಮಂತಿಕೆಯಿಂದ ಮತ್ತು ಸಂತೋಷದಿಂದ ಕೂಡಿರಬೇಕೆಂದು ಬಯಸುತ್ತಾರೆ. ಆದರೆ, ಇದು ಎಲ್ಲರಿಗೂ ಸಾಧ್ಯವಿಲ್ಲ. ಜೀವನದ ಒಂದು ಭಾಗ ಸಂತೋಷವಾಗಿದ್ದರೆ, ಇನ್ನೊಂದು ಭಾಗ ದುಃಖದಿಂದ ತುಂಬಿರುತ್ತದೆ ಎಂಬುದು ಪ್ರಕೃತಿಯ ನಿಯಮ.

blank

ಜೀವನಪರ್ಯಂತ ದುಃಖಿತರಾಗಿರುವ ಜನರಿಲ್ಲ. ಅದೇ ರೀತಿ ಸಂತೋಷವಾಗಿರುವ ಜನರೂ ಇಲ್ಲ. ಹಿಂದು ಧರ್ಮಗ್ರಂಥಗಳು ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಪದೇ ಪದೇ ಸಂಭವಿಸುವ ಕೆಲವು ಚಿಹ್ನೆಗಳು ನಮ್ಮ ಜೀವನದಲ್ಲಿ ಕೆಟ್ಟ ಸಮಯಗಳ ಆರಂಭವನ್ನು ಸೂಚಿಸಬಹುದು ಎಂದು ನಂಬಲಾಗಿದೆ. ಆ ಸಂಕೇತಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.

ಅಂದಹಾಗೆ ತುಳಸಿ ಸಸ್ಯವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ನೈಸರ್ಗಿಕ ಶಕ್ತಿಯನ್ನು ಹೊಂದಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಇದನ್ನು ಲಕ್ಷ್ಮಿ ದೇವಿಯ ಪುನರ್ಜನ್ಮ ಎಂದೂ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಹಿಂದುಗಳು ಇದನ್ನು ತಮ್ಮ ಮನೆಗಳಲ್ಲಿ ಇಟ್ಟು ಪೂಜಿಸುತ್ತಾರೆ.

ನಿಮ್ಮ ಮನೆಯಲ್ಲಿರುವ ತುಳಸಿ ಗಿಡವು ಮುಂಬರುವ ಕೆಟ್ಟ ಸಮಯವನ್ನು ಮುನ್ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಏನಾದರೂ ಒಣಗಿ ಹೋದರೆ, ನೀವು ದೊಡ್ಡ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಸನ್ನಿಹಿತವಾಗುತ್ತಿರುವ ದುರಾದೃಷ್ಟದ ಎಚ್ಚರಿಕೆಯಾಗಿದೆ.

ಇದನ್ನೂ ಓದಿ: ವರುಣ್ ಚಕ್ರವರ್ತಿ ಮಾತ್ರವಲ್ಲ ಅವರಿಂದಲೂ… ಸೆಮಿಫೈನಲ್​ಗೂ ಮುಂಚೆಯೇ ಸ್ಟೀವ್​ ಸ್ಮಿತ್​ ಅಚ್ಚರಿ ಹೇಳಿಕೆ! Steve smith

ಶಾಸ್ತ್ರಗಳ ಪ್ರಕಾರ, ನಿಮ್ಮ ಮನೆಯಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಿದ್ದರೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂಬುದನ್ನು ಸೂಚಿಸುತ್ತದೆ. ಹಣದ ದೇವತೆ ಎಂದು ಪರಿಗಣಿಸಲಾದ ಲಕ್ಷ್ಮಿ ದೇವಿಯು ಜಗಳಗಳು ಮತ್ತು ಭಿನ್ನಾಭಿಪ್ರಾಯಗಳಿರುವ ಸ್ಥಳದಲ್ಲಿ ವಾಸಿಸುವುದಿಲ್ಲ. ಇದನ್ನು ಕೆಟ್ಟ ಸಮಯಗಳು ಪ್ರಾರಂಭವಾಗುವ ಸೂಚನೆಯನ್ನಾಗಿ ನೋಡಲಾಗುತ್ತದೆ.

ನಿಮ್ಮ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಆದರೆ, ಪೂಜಾ ಕೊಠಡಿ ಧೂಳಿನಿಂದ ಕೂಡಿದ್ದು, ಕೊಳಕಾಗಿದ್ದರೆ ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮನೆಯಲ್ಲಿ ಗಾಜಿನ ವಸ್ತುಗಳು ಅಥವಾ ಕನ್ನಡಿಗಳು ಆಗಾಗ್ಗೆ ಒಡೆಯುವುದು ಭವಿಷ್ಯದಲ್ಲಿ ಬರಲಿರುವ ಕೆಟ್ಟ ಘಟನೆಗಳ ಸೂಚನೆಯಾಗಿರಬಹುದು. ಈ ಎಲ್ಲ ಲಕ್ಷಣಗಳು ನಿಮ್ಮ ಮನೆಯಲ್ಲಿ ಇದ್ದರೆ, ನಿಮ್ಮ ಭವಿಷ್ಯ ಮತ್ತು ಹಣಕಾಸಿನ ಬಗ್ಗೆ ಬಹಳ ಜಾಗರೂಕರಾಗಿರುವುದು ತುಂಬಾನೇ ಮುಖ್ಯ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.

ಮನೇಲಿ ಈ ವಸ್ತುಗಳಿದ್ರೆ ಸಾಕು ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತೆ: ಹಣದ ಸಮಸ್ಯೆಯೂ ದೂರ! Goddess Lakshmi

ಈ 3 ರಾಶಿಯವರು ಪ್ರತಿಯೊಂದರಲ್ಲೂ ಪರಿಪೂರ್ಣತೆ ಬಯಸುತ್ತಾರೆ: ಜ್ಞಾನದಲ್ಲಿ ಸದಾ ಮುಂದು! Zodiac Signs

 

 

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank