'ಓಜಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಿಗ್​ ಬಾಸ್ ಸೀಸನ್​ 7ರ​ ಬೆಡಗಿ

Untitled design - 2023-09-06T165757.756
Published on

ಆಂಧ್ರಪ್ರದೇಶ: ಟಾಲಿವುಡ್​ನ ಪವರ್​ ಸ್ಟಾರ್​, ನಟ ಪವನ್​ ಕಲ್ಯಾಣ್​ ನಟನೆಯ ಬಹುನಿರೀಕ್ಷಿತ 'ಓಜಿ' ಚಿತ್ರದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡುತ್ತಿದ್ದು, ಸದ್ಯ ಸಿನಿಮಾ ಕುರಿತು ಇತ್ತೀಚೆಗೆ ಪ್ರಕಟಗೊಂಡ ಹೊಸ ಮಾಹಿತಿಯೊಂದು ಫ್ಯಾನ್ಸ್​ಗಳಲ್ಲಿ ಮತ್ತಷ್ಟು ಕೌತುಕ ಹೆಚ್ಚಿಸಿದೆ.

ತೆಲುಗು ಬಿಗ್ ಬಾಸ್​ ಸೀಸನ್ 07ರ ಸ್ಪರ್ಧಿ ಸುಭಾಶ್ರೀ ರಾಯಗುರು ಇದೀಗ ಪವನ್ ಕಲ್ಯಾಣ್​ ಅವರ 'ಓಜಿ' ಚಿತ್ರಕ್ಕೆ ಎಂಟ್ರಿ ಕೊಡಲಿದ್ದು, ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. 2022 ರಲ್ಲಿ 'ರುದ್ರವೀಣಾ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ, ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: https://youtu.be/mss70GjAR8U

ಹಾರರ್​ ಚಿತ್ರದ ಮುಖೇನ ಸಿನಿಪಯಣ ಆರಂಭಿಸಿದ ನಟಿ ಈಗ ಟಾಲಿವುಡ್​ನ ಪವರ್​ ಸ್ಟಾರ್​ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಸುಜೀತ್ ನಿರ್ದೇಶನದ ಈ ಸಿನಿಮಾದಲ್ಲಿ ಸುಭಾಶ್ರೀಗೆ ಮಹತ್ವದ ಪಾತ್ರವೊಂದು ಲಭಿಸಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ, "ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್​ನ ಭಾಗವಾಗಿರುವುದು ನನಗೆ ಬಹಳ ಸಂತಸ ತಂದಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net