

ಹೈದರಾಬಾದ್: ವಿವಾದಿತ ರಿಯಾಲಿಟಿ ಶೋ ಬಿಗ್ಬಾಸ್, ತೆಲುಗಿನಲ್ಲಿ ಮತ್ತೊಮ್ಮೆ ಅತಿ ಶೀಘ್ರದಲ್ಲಿ ಬರುವುದಾಗಿ ಸ್ಟಾರ್ ಮಾ ಚಾನೆಲ್ ಖಚಿತಪಡಿಸಿದೆ. ಮೂರನೇ ಆವೃತ್ತಿ ನಿರೂಪಣೆ ಮಾಡಿದ್ದ ಅಕ್ಕಿನೇನಿ ನಾಗಾರ್ಜುನ್ ಅವರೇ ನಾಲ್ಕನೇ ಆವೃತ್ತಿಯ ಬಿಗ್ಬಾಸ್ ಹೋಸ್ಟ್ ಮಾಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.
ಈಗಾಗಲೇ ಕಾರ್ಯಕ್ರಮದ ಲೋಗೋ ಬಿಡುಗಡೆಯಾಗಿದ್ದು ಹೆಚ್ಚಿನ ನೀರಿಕ್ಷೆ ಮೂಡಿಸಿದೆ. ನಾಗಾರ್ಜುನ್ ಅವರು ಪ್ರತಿ ಎಪಿಸೋಡ್ಗೆ 12 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಎಲ್ಲೆಡೆ ಹರಿದಾಡಿತ್ತು, ಇದೀಗ್ ಬಿಗ್ಬಾಸ್ ಸೆಟ್ ವೆಚ್ಚದ ಬಗೆಗಿನ ಸುದ್ದಿ ಕಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿದೆ. ಬಿಗ್ಬಾಸ್ ಸೆಟ್ಗೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಎಂದಿನಂತೆಯೇ ಬಿಗ್ಬಾಸ್ ಮನೆ ವೈಭವದಿಂದ ಕೂಡಿರಲಿದೆ. ಸೀಕ್ರೆಟ್ ರೂಮ್, ಡೈನಿಂಗ್ ಹಾಲ್, ಕಿಚನ್, ಗಾರ್ಡನ್, ಮಲಗುವ ಕೋಣೆ ಎಲ್ಲವೂ ವಿಶೇಷತೆಯಿಂದ ಕೂಡಿರಲಿದೆಯಂತೆ.
ಇನ್ನುಇ ನಾಗಾರ್ಜುನ ಅವರು ಇಡೀ ಕಾರ್ಯಕ್ರಮದ ನಿರೂಪಣೆಗಾಗಿ ಬರೋಬ್ಬರಿ 8 ಕೋಟಿ ರೂ. ಸಂಭಾವಣೆ ಪಡೆದಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಆದರೆ ಇದ್ಯಾವುದೂ ಅಧಿಕೃತವಲ್ಲ ಎಂಬುದೇ ಸದ್ಯದ ಮಾಹಿತಿ.
ಈಗಾಗಲೇ ಸ್ಪರ್ಧಿಗಳ ಹೆಸರು ಸಹ ಹರಿದಾಡುತ್ತಿದೆ. ಅದರಲ್ಲಿ ನಟಿ ಪೂನಂ ಬಜ್ವಾ ಪಾಲ್ಗೊಳ್ಳುವುದು ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಕರೊನಾ ನಡುವೆಯೂ ಶೋ ಏರ್ಪಡಿಸುತ್ತಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ರೀತಿ ಕಾರ್ಯಕ್ರಮ ನಡೆಸಿ ಕೊಡುತ್ತಾರೆ ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.
ಸಿನಿಮಾ ವಿಚಾರಕ್ಕೆ ಬಂದರೆ ನಾಗಾರ್ಜುನ್ ಅವರು ಸದ್ಯ ವೈಲ್ಡ್ ಡಾಗ್ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)