More

    VIDEO| ಇದುವರೆಗೂ ನೋಡಿರದ ವಿಚಿತ್ರ ಔಟ್ ಇದು: ಅತ್ತಿತ್ತಲು ಉರುಳಿತು ವಿಕೆಟ್​..!

    ಸಿಡ್ನಿ: ಬಿಗ್​ ಬ್ಯಾಷ್​ ಲೀಗ್​ನಲ್ಲಿ ಓರ್ವ ಬ್ಯಾಟ್ಸ್​ಮನ್​ ಒಂದೇ ಸಮಯದಲ್ಲಿ ಎರಡು ಬಾರಿ ಔಟಾದ ಅಪರೂಪದ ಘಟನೆ ಜರುಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಅಡಿಲೇಡ್​ ಸ್ಟ್ರೈಕರ್ಸ್​​ ತಂಡದ ಆರಂಭಿಕ ಆಟಗಾರ ಜೇಕ್​ ವೆದರಾಲ್ಡ್,​ ಭಾನುವಾರ ಸಿಡ್ನಿ ಥಂಡರ್​​​ ವಿರುದ್ಧ ನಡೆದ ಪಂದ್ಯದಲ್ಲಿ ಕ್ರೀಸ್​ನ​ ಎರಡು ತುದಿಗಳಲ್ಲಿ ಔಟಾಗುವ ಮೂಲಕ ವಿನೂತನವಾಗಿ ವಿಕೆಟ್ ಒಪ್ಪಿಸಿದ ಪ್ರಸಂಗಕ್ಕೆ ಸಾಕ್ಷಿಯಾದರು.

    ಇದನ್ನೂ ಓದಿರಿ: ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

    ಮೊದಲನೇ ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಫಿಲಿಪ್​ ಸಾಲ್ಟ್​ ಬಾರಿಸಿದ ಚೆಂಡು​ ಬೌಲರ್​ ಕ್ರಿಸ್​ ಗ್ರೀನ್​ನತ್ತ ಧಾವಿಸಿ ಬಂದಿತು. ಗ್ರೀನ್​ ಅವರ ಎಡಗೈಗೆ ಚೆಂಡು ತಾಗಿ ಸ್ಟಂಪ್​ಗೆ ಬಡಿಯಿತು. ಅಷ್ಟರಲ್ಲಾಗಲೇ ಕ್ರೀಸ್​ ಬಿಟ್ಟಿದ್ದ ವೆದರಾಲ್ಡ್ ಮತ್ತೆ ಬ್ಯಾಟ್​ ಹಿಂದಕ್ಕೆ ಇಡುವಷ್ಟರಲ್ಲಿ ವಿಕೆಟ್​ಗೆ ತಾಗಿದ ಚೆಂಡು ಕೊಂಚ ದೂರ ಸಾಗಿತು. ಇತ್ತ ಫಿಲಿಪ್​ ಸಾಲ್ಟ್​ ಅವರು ಸಿಂಗಲ್​ ರನ್​ ಕದಿಯಲು ಮುಂದಾದಾಗ ವೆದರಾಲ್ಡ್​ ಸಹ ಸ್ಟ್ರೈಕರ್​ ವಿಭಾಗಕ್ಕೆ ಓಡಿದರು. ಅಷ್ಟರಲ್ಲಿ ಕ್ಷೇತ್ರರಕ್ಷಕ ಎಸೆದ ಚೆಂಡನ್ನು ವಿಕೆಟ್​ ಕೀಪರ್ ಸ್ಯಾಮ್​ ಬಿಲ್ಲಿಂಗ್ಸ್​ ಹಿಡಿದುಕೊಂಡು ವೆದರಾಲ್ಡ್​ ಕ್ರೀಸ್​ಗೆ ಬರುವ ಮುನ್ನವೇ ವಿಕೆಟ್​ ಉರುಳಿಸಿದರು.

    ವೆದರಾಲ್ಡ್​ ಎರಡು ಬಾರಿ ಔಟಾದರೂ ಕೂಡ ಮೊದಲ ನಾನ್​ ಸ್ಟ್ರೈಕರ್​ ವಿಭಾಗದ ವಿಕೆಟ್​ ಅನ್ನು ಔಟ್​ ಎಂದು ನಿರ್ಣಯಿಸಲಾಯಿತು. ಇದಕ್ಕೂ ಮುನ್ನ ವಿಕೆಟ್​ ರಿವ್ಯೂವ್​ ಗಮನಿಸಿದ ಥರ್ಡ್​ ಅಂಪೈರ್​, ಚೆಂಡು ವಿಕೆಟ್​ಗೆ ತಾಗುವ ಮುನ್ನ ನಾನ್​ ಸ್ಟ್ರೈಕರ್​ ವಿಭಾಗದಲ್ಲಿ ವೆದರಾಲ್ಡ್ ಬ್ಯಾಟ್​ ಗಾಳಿಯಲ್ಲಿರುವುದನ್ನು ಪರಿಗಣಿಸಿ ಔಟ್​ ಎಂದು ನಿರ್ಣಯಿಸಿದರು. ​

    ಇದನ್ನೂ ಓದಿರಿ: ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…

    ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಂದು (ಜ.24) ಬೆಳಗ್ಗೆ 11:48ಕ್ಕೆ ಕೆಎಫ್​ಸಿ ಬಿಗ್​ ಬ್ಯಾಷ್​ ಲೀಗ್​ (KFC Big Bash League) ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು ಕೆಲವೇ ಗಂಟೆಗಳಲ್ಲಿ 65 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ವೈರಲ್​ ಆಗುತ್ತಿದೆ.

    ಪಂದ್ಯದ ಫಲಿತಾಂಶಕ್ಕೆ ಬರುವುದಾದರೆ, ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 159 ರನ್​ ಕಲೆಹಾಕಿದ್ದ ಅಡಿಲೇಡ್ ಸ್ಟ್ರೈಕರ್ಸ್​ ತಂಡ ಎದುರಾಳಿ ಸಿಡ್ನಿ ಥಂಡರ್ಸ್ (20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 153 ರನ್​)​ ವಿರುದ್ಧ 6 ರನ್​ಗಳ ಜಯ ಸಾಧಿಸಿದೆ. (ಏಜೆನ್ಸೀಸ್​)

    ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!

    ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

    ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts