More

    ಕಾಲ್ ಗರ್ಲ್​ಗೆ ಅಪ್ಪನ ಅಕೌಂಟ್​ನಿಂದಲೇ 18 ಲಕ್ಷ ರೂಪಾಯಿ ಟ್ರಾನ್ಸ್ಫರ್ ಮಾಡಿದ ಹಂಟರ್ ಬೈಡೆನ್! ಲ್ಯಾಪ್​ಟಾಪ್​ನಲ್ಲಿತ್ತು ರೋಚಕ ಕಥೆ!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮಗ ಹಂಟರ್ ಬೈಡೆನ್ ಅವರ ಬಗ್ಗೆ ಈಗಾಗಲೇ ಅನೇಕ ಆರೋಪಗಳು ಇರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರಗಳೇ. ಆದರೆ ಹೆಚ್ಚು ಸುದ್ದಿಯಾಗದ ಮತ್ತೊಂದು ಆರೋಪ ಹಂಟರ್ ಅವರ ಮೇಲಿದೆ. ಕಾಲ್ ಗರ್ಲ್​ ಒಬ್ಬಳಿಗೆ ಬರೋಬ್ಬರಿ 18 ಲಕ್ಷ ರೂಪಾಯಿಯನ್ನು ಅವರು ಅಪ್ಪನ ಅಕೌಂಟ್​ನಿಂದಲೇ ಟ್ರಾನ್ಸ್ಫರ್ ಮಾಡಿದ್ದರು ಎನ್ನಲಾಗಿದೆ.


    2018ರ ಮೇ ತಿಂಗಳಲ್ಲಿ ಹಂಟರ್ ಅವರು ಚಟೌ ಮಾರ್ಮಾಂಟ್ ಹೆಸರಿನ ಹೋಟೆಲ್​ನಲ್ಲಿ ತಂಗಿದ್ದರು. ಆ ವೇಳೆ ಎಮರಾಲ್ಡ್ ಫ್ಯಾಂಟಸಿ ಹೆಸರಿನ ವೇಶ್ಯಾವಾಟಿಕೆ ಕೇಂದ್ರದಿಂದ ಯಾನಾ ಎಂಬ ಕಾಲ್​ ಗರ್ಲ್​ಗೆ ಮೆಸೇಜ್ ಮಾಡಿ ಕರೆಸಿಕೊಂಡಿದ್ದರು. ರಾತ್ರಿಯಿಡಿ ಆಕೆಯೊಂದಿಗೆ ವೈನ್ ಕುಡಿಯುತ್ತಾ, ಅಶ್ಲೀಲ ವಿಡಿಯೋಗಳನ್ನು ಮಾಡುತ್ತಾ ಕಳೆದಿದ್ದರು. ಅದಾದ ನಂತರ ಅವರ ಕಾರ್ಡ್​ನಿಂದ ಹಣ ಸಂದಾಯ ಮಾಡಲು ಪ್ರಯತ್ನಿಸಿದ್ದರಾದರೂ ಕಾರ್ಡ್​ ಡಿಕ್ಲೇನ್ ಆಗಿತ್ತು.


    ನಂತರ ಬೇರೊಂದು ಅಕೌಂಟ್​ನಿಂದ ನಾಲ್ಕೈದು ಬಾರಿ ಒಟ್ಟು 25 ಸಾವಿರ ಡಾಲರ್ ಅಂದರೆ ಸರಿಸುಮಾರು 18 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು. ಕೇವಲ ಒಂದು ಗಂಟೆಯ ಅವಧಿಯಲ್ಲಿ ಅಷ್ಟೂ ಹಣ ಸಂದಾಯವಾಗಿತ್ತು. ಅದನ್ನು ಕಂಡ ಯಾನಾ ನನ್ನ ಅಕೌಂಟ್​ನಲ್ಲಿ ಇಷ್ಟೊಂದು ಹಣವನ್ನು ಎಂದೂ ನೋಡಿರಲಿಲ್ಲ ಎಂದು ಮೆಸೇಜ್ ಮಾಡಿದ್ದಳು. ಅಂದ ಹಾಗೆ ಯಾನಾ ಬಳಿ ತನ್ನ ನಿಜವಾದ ಹೆಸರನ್ನು ಹೇಳದ ಹಂಟರ್ ಬೇರೆ ಹೆಸರಿನಿಂದ ಮೆಸೇಜ್ ಮಾಡಿದ್ದ ಎನ್ನಲಾಗಿದೆ.


    ಹಂಟರ್ ಬೈಡೆನ್​ ಈ ಎಲ್ಲ ಗುಟ್ಟುಗಳನ್ನು ತನ್ನದೊಂದು ಲ್ಯಾಪ್​ಟಾಪ್​ನಲ್ಲಿ ಸಂಗ್ರಹಿಸಿಟ್ಟಿದ್ದ. ಅದೇ ಲ್ಯಾಪ್​ಟಾಪ್​ನಿಂದ ಯಾನಾ ಜತೆ ಚಾಟ್ ಮಾಡಿದ್ದ ಕೂಡ. ಅದಾಗಿ ಒಂದು ವರ್ಷದ ನಂತರ ಆ ಲ್ಯಾಪ್​ಟಾಪ್​ ಅನ್ನು ರಿಪೇರಿಗೆ ಕೊಟ್ಟು ಅಲ್ಲೇ ಮರೆತುಬಿಟ್ಟಿದ್ದ. ನಂತರ ಅದರಲ್ಲಿದ್ದ ಸೀಕ್ರೇಟ್​ಗಳು ಒಂದೊಂದಾಗಿ ಹೊರಬರುತ್ತಿರುವುದಾಗಿ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಅದೇನೇ ಇರಲಿ, ರಾಜಕೀಯದಲ್ಲಿ ನಾಯಕನಾಗಿದ್ದ ಅಪ್ಪನ ಅಕೌಂಟ್​ನಿಂದ ಏಕಾಗಿ ಹಣ ಸಂದಾಯ ಆಯಿತು ಎನ್ನುವ ಚರ್ಚೆಯಂತೂ ಅಮೆರಿಕದ ರಾಜಕೀಯ ವಲಯದಲ್ಲಿ ಜೋರಾಗಿದೆ. (ಏಜೆನ್ಸೀಸ್)

    ಮದುವೆಯಾಗಿ ಗಂಡನ ಮನೆ ಹೊಸ್ತಿಲು ತುಳಿಯುವುದರೊಳಗೇ ನಡೆಯಿತು ದುರಂತ!

    ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts