ನಾಲ್ಕು ತಿಂಗಳ ಹಿಂದೆ ಕಾಣೆಯಾದ ಪತ್ನಿ, ಮಕ್ಕಳಿಗಾಗಿ ವ್ಯಕ್ತಿಯ ಅಲೆದಾಟ: ಕಣ್ತೆರೆಯದ ಪೊಲೀಸರು!

Wife Missing
Published on

ಬೀದರ್: ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕಳೆದ 4 ತಿಂಗಳಿಂದ ಹೆಂಡತಿ ಕಾಣೆಯಾಗಿದ್ದು, ಹುಡುಕಾಡುವ ತನ್ನ ಪ್ರಯತ್ನ ಫಲ ನೀಡದಿದ್ದಾಗ ಪೊಲೀಸರ ಮೊರೆಹೋದ ವ್ಯಕ್ತಿಯ ನೋವಿಗೆ ಸ್ಪಂದನೆ ದೊರೆಯದ ಆರೋಪ ಬೀದರ್​ ಪೊಲೀಸರ ವಿರುದ್ಧ ಕೇಳಿಬಂದಿದೆ.

ಬೀದರ್​ನ ಚಿಟ್ಟವಾಡಿಯ ಖರ್ಗೆ ಕಾಲೋನಿಯ ನಿವಾಸಿ ಸತೀಶ ಮಾರುತಿ ದೇಸಾಯಿ ಪತ್ನಿ ಪ್ರಿಯಾಂಕ ಮತ್ತು ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಕಳೆದ ಫೆಬ್ರವರಿ 21ರ ಮಧ್ಯಾಹ್ನದ ಸಮಯದಲ್ಲಿ ಮಗುವಿನ ಜತೆಯಲ್ಲಿ ಮತ್ತೊಂದು ಮಗುವನ್ನು ಶಾಲೆಯಿಂದ ಕರೆತರಲು ಪ್ರಿಯಾಂಕ ಹೋಗಿದ್ದರು. ಆದರೆ, ಮರಳಿ ಬರಲೇ ಇಲ್ಲ.

ಅಂದಿನಿಂದ ಇಂದಿನವರೆಗೂ ಪ್ರಿಯಾಂಕ ಮಕ್ಕಳೊಂದಿಗೆ ಕಾಣೆಯಾಗಿದ್ದು, ಸತೀಶ್​ ಅವರಿಗಾಗಿ ಊರೂರು ಅಲೆದಾಡಿ ಪತ್ತೆ ಮಾಡಲು ಸಾಧ್ಯವಾಗದೇ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ, ಕರೊನಾ ನೆಪ ಹೇಳಿ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಮಾಡಿದ್ದಾರೆ.

ನಗರದ ಗಾಂಧಿ ಗಂಜ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್​, ಹೆಂಡತಿ ಮಕ್ಕಳನ್ನು ಹುಡುಕುವ ಪ್ರಯತ್ನ ಮುಂದುವರಿಸಿದ್ದಾರೆ. ಈಗಲಾದರೂ ನೊಂದ ವ್ಯಕ್ತಿಗೆ ಖಾಕಿ ನ್ಯಾಯಾಕೊಡಿಸಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net