ಭಟ್ಕಳ​ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಸರ್ಕಾರ

Hizbul
Published on

ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯ್ದೆಯಡಿ ಒಟ್ಟು 18 ಮಂದಿಯನ್ನು ಕೇಂದ್ರ ಸರ್ಕಾರ ಉಗ್ರರು ಎಂದು ಘೋಷಣೆ ಮಾಡಿದೆ.

ಪಾಕಿಸ್ತಾನ ಮೂಲದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್​ ಸಲಾಹುದ್ದೀನ್​ ಮತ್ತು ಭಟ್ಕಳ​ ಸಹೋದರರಾದ ರಿಯಾಜ್​ ಮತ್ತು ಇಕ್ಬಾಲ್​ ಸೇರಿ ಒಟ್ಟು 18 ಮಂದಿಯನ್ನು ಕೇಂದ್ರ ಸರ್ಕಾರ ಈಗ ಉಗ್ರರ ಪಟ್ಟಿಗೆ ಸೇರಿಸಿದೆ. ಇದನ್ನೂ ಓದಿ: ಪೊಲೀಸ್​​ ಅಧಿಕಾರಿಯನ್ನೇ ಕೊಲೆ ಮಾಡಿದ ಕೋಳಿ: ದುರಂತ ಹಿಂದಿದೆ ಶಾಕಿಂಗ್​ ಕಾರಣ..!

ಇದೀಗ ಕೇಂದ್ರ ಉಗ್ರರು ಎಂದು ಘೋಷಿಸಿದವರಲ್ಲಿ ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜೀದ್​ ಮಿರ್​ ಕೂಡ ಇದ್ದು, ಈತ 26/11ರ ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ. ಹಾಗೇ ಯುಸುಫ್​ ಮುಜಾಮ್ಮಿಲ್​ ಎಂಬುವನೂ ಕೂಡ ಮುಂಬೈ ದಾಳಿಯ ಆರೋಪಿ. ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಸಹಾಯಕ ಛೋಟಾ ಶಕೀಲ್​ ಕೂಡ ಉಗ್ರ ಪಟ್ಟಿಗೆ ಸೇರಿದ್ದಾನೆ. ಇದನ್ನೂ ಓದಿ: ಫೇಸ್​​ಬುಕ್​​ನಲ್ಲಿ ಅವಾಚ್ಯ ಕಾಮೆಂಟ್​; ಸೈಬರ್​ ಕ್ರೈಂಗೆ ದೂರು ನೀಡಿದ ವಿಧಾನ ಪರಿಷತ್​ ಸದಸ್ಯ

ರಾಷ್ಟ್ರದ ಭದ್ರತೆಯ ಬಗೆಗಿನ ಬದ್ಧತೆ ಮತ್ತು ಭಯೋತ್ಪಾದಕತೆಯೆಡೆಗಿನ ಶೂನ್ಯ ಸಹಿಷ್ಣುತೆ ನೀತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಒಟ್ಟು 18 ಮಂದಿಯನ್ನು ಉಗ್ರರು ಎಂದು ಘೋಷಣೆ ಮಾಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇವರೆಲ್ಲರೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡವರೇ ಆಗಿದ್ದಾರೆ. ದೇಶವನ್ನು ಅಸ್ಥಿರಗೊಳಿಸುವ ಕೃತ್ಯಗಳನ್ನು ನಡೆಸಿದ್ದಾರೆ. ಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ 2019ರ ಸೆಪ್ಟೆಂಬರ್​ನಲ್ಲಿ ನಾಲ್ವರನ್ನು, 2020ರ ಜುಲೈನಲ್ಲಿ 9 ಮಂದಿಯನ್ನು ಉಗ್ರರು ಎಂದು ಘೋಷಣೆ ಮಾಡಿತ್ತು. ( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net