More

    ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ: ದುರಂತ ಘಟನೆ ಹಿಂದಿದೆ ಶಾಕಿಂಗ್​ ಕಾರಣ..!

    ಮನಿಲಾ: ಅಕ್ರಮ ಕೋಳಿ ಜಗಳ ಸ್ಪರ್ಧೆಯ ವಿರುದ್ಧದ ಕಾರ್ಯಾಚರಣೆ ವೇಳೆ ಕೋಳಿಯೊಂದು ಪೊಲೀಸ್​ ಅಧಿಕಾರಿಯನ್ನು ಕೊಲೆ ಮಾಡಿರುವ ಘಟನೆ ಫಿಲಿಫೈನ್ಸ್​ನಲ್ಲಿ ನಡೆದಿದೆ.

    ಇದೇನಪ್ಪಾ ಒಂದು ಸಣ್ಣ ಕೋಳಿ ಪೊಲೀಸ್​ ಅಧಿಕಾರಿಯನ್ನು ಕೊಲೆ ಮಾಡುವಷ್ಟು ಬಲಿಷ್ಟವಾ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಘಟನೆಯಲ್ಲಿನ ತಿರುವಿಗೆ ಕೋಳಿಯ ಕಾಲಿನಲ್ಲಿದ್ದ ಹರಿತವಾದ ಬ್ಲೇಡ್​ ಕಾರಣವಾಗಿದೆ. ಕೋಳಿ ಜಗಳದ ವೇಳೆ ಕಟ್ಟಲಾಗುವ ಬ್ಲೇಡ್​ನಿಂದಲೇ ಅಧಿಕಾರಿಯ ಪ್ರಾಣಹೋಗಿದೆ. ಕಾಲಿನ ನಾಡಿಯನ್ನು ಕೋಳಿಯ ಬ್ಲೇಡ್​ ಕತ್ತರಿಸಿದ ಪರಿಣಾಮ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಸಿಬ್ಬಂದಿಗೆ ದುಬಾರಿ ಕಾರು ಗಿಫ್ಟ್​ ಮಾಡಿದ ನಟಿ ಜಾಕ್ವೆಲಿನ್​ – ವಿಡಿಯೋ ವೈರಲ್

    ಈ ವಿಚಿತ್ರ ಘಟನೆ ಸೋಮವಾರ (ಅ. 26) ಫಿಲಿಫೈನ್ಸ್​ನ ಉತ್ತರ ನಾರ್ಥರನ್​ ಸಮರ್​ನಲ್ಲಿ ನಡೆದಿದೆ. ಅಕ್ರಮ ಕೋಳಿ ಜಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂಬ ಮಾಹಿತಿ ತಿಳಿದು ದಾಳಿ ಮಾಡಲು ತೆರಳಿದಿದ್ದಾಗ ಕೋಳಿ ಬ್ಲೇಡ್​ ದಾಳಿಗೆ ಲೆಫ್ಟಿನೆಂಟ್​ ಕ್ರಿಶ್ಚಿಯನ್​ ಮೃತಪಟ್ಟಿದ್ದಾರೆ. ಎಡಭಾಗದ ಕಾಲಿನ ತೊಡೆಯ ನಾಡಿಯಲ್ಲಿ ಬ್ಲೇಡ್​ ಸಿಲುಕಿಕೊಂಡಿತ್ತು. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಪ್ರಾಂತೀಯ ಪೊಲೀಸ್​ ಮುಖ್ಯಸ್ಥ ಕರ್ನಲ್​ ಅರ್ನೆಲ್​ ಅಪುಡ್​ ಅವರು ಮಾಹಿತಿ ನೀಡಿದ್ದಾರೆ.

    ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ: ದುರಂತ ಘಟನೆ ಹಿಂದಿದೆ ಶಾಕಿಂಗ್​ ಕಾರಣ..!

    ಕೋಳಿ ಜಗಳ ಸ್ಪರ್ಧೆ ಅಥವಾ ಟಪಡಾ ಫಿಲಿಫೈನ್​ನ ಪ್ರಸಿದ್ಧ ರಕ್ತಸಿಕ್ತ ಸ್ಪರ್ಧೆಯಾಗಿದೆ. ಇದೊಂದು ಬೆಟ್ಟಿಂಗ್​ ದಂಧೆಯಾಗಿದ್ದು, ಕೋಳಿಗಳ ಕಾಲಿಗೆ ಬ್ಲೇಡ್​ಗಳನ್ನು ಅಳವಡಿಸಿ ಜಗಳಕ್ಕೆ ಬಿಟ್ಟು ದುಡ್ಡು ಕಟ್ಟಿ ಪಂದ್ಯವಾಡುತ್ತಾರೆ. ಜಗಳಕ್ಕೆ ಧುಮುಕುವ ಕೋಳಿಗಳು ಒಂದಕ್ಕೊಂದು ಗುದ್ದಾಡುವಾಗ ಬ್ಲೇಡ್​ನಿಂದಾಗುವ ಗಾಯಗಳಿಂದ ರಕ್ತ ಸೋರಿ ಪ್ರಾಣ ಬಿಡುತ್ತವೆ. ಜೀವಂತವಾಗಿ ಉಳಿಯುವ ಕೋಳಿಯೇ ವಿಜೇತಶಾಲಿ ಎಂದು ಪರಿಗಣಿಸಲಾಗುತ್ತದೆ. ಯಾರು ಆ ಕೋಳಿಯ ಪರ ದುಡ್ಡು ಕಟ್ಟಿರುತ್ತಾರೋ ಅವರಿಗೆ ಹಣ ಸಿಗುತ್ತದೆ.

    ಇದನ್ನೂ ಓದಿ: ಗೃಹ ಸಚಿವಾಲಯದ ಮಹತ್ವದ ಆದೇಶ; ಜಮ್ಮು-ಕಾಶ್ಮೀರದಲ್ಲಿ ನೀವೂ ಭೂಮಿ ಖರೀದಿಸಬಹುದು..!

    ಕರೊನಾ ಹಿನ್ನೆಲೆಯಲ್ಲಿ ಎಲ್ಲೂ ಜನಸಮೂಹ ಸೇರಬಾರದೆಂಬ ನಿಯಮ ಇನ್ನು ಜಾರಿಯಲ್ಲಿದೆ. ಹೀಗಾಗಿ ಹೆಚ್ಚು ಜನ ಸೇರುತ್ತಾರೆಂಬ ಕಾರಣಕ್ಕೆ ಫಿಲಿಫೈನ್​ನಲ್ಲಿ ಸ್ಪರ್ಧೆಯನ್ನು ಬ್ಯಾನ್​ ಮಾಡಲಾಗಿದೆ. ಹೀಗಿದ್ದರೂ ಅದನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. ಇದರ ಮಾಹಿತಿ ತಿಳಿದು ದಾಳಿ ಮಾಡಿದಾಗ ದುರ್ಘಟನೆ ಸಂಭವಿಸಿದೆ. ಫಿಲಿಫೈನ್​ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೊಲೀಸ್​ ಅಧಿಕಾರಿಯೊಬ್ಬ ಕೋಳಿಯಿಂದ ಬಲಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ವಿಷಾದ ವ್ಯಕ್ತಪಡಿಸಿದ್ದಾರೆ.

    ಇದರ ಹೊರತಾಗಿಯೂ ಅಕ್ರಮ ಕೋಳಿ ಜಗಳ ಸ್ಪರ್ಧೆ ಆಯೋಜಿಸಿದ್ದ ಮೂವರನ್ನು ಬಂಧಿಸಲಾಗಿದ್ದು, ಎರಡು ಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಮೂವರು ಶಂಕಿತರನ್ನು ಪತ್ತೆಹಚ್ಚಿರುವುದಾಗಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts