More

    ಗೃಹ ಸಚಿವಾಲಯದ ಮಹತ್ವದ ಆದೇಶ; ಜಮ್ಮು-ಕಾಶ್ಮೀರದಲ್ಲಿ ನೀವೂ ಭೂಮಿ ಖರೀದಿಸಬಹುದು..!

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ತಕ್ಷಣದಿಂದಲೇ ರಿಯಲ್​ ಎಸ್ಟೇಟ್​ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ-2016 ಅನ್ವಯ ಆಗಲಿದೆ ಎಂದು ಕೇಂದ್ರ ಗೃಹಸಚಿವಾಲಯ ಸೂಚಿಸಿದೆ.

    ಕಳೆದ ವರ್ಷ ಆರ್ಟಿಕಲ್​ 370, 35 ಎ ರದ್ದುಗೊಳಿಸಿದ ನಂತರ ಅಲ್ಲಿ ಮಹತ್ವದ ಯಾವುದೇ ಬದಲಾವಣೆಗಳನ್ನೂ ಮಾಡಿರಲಿಲ್ಲ. ಅಲ್ಲಿನ ಭೂಮಿ, ಪ್ರವಾಸೋದ್ಯಮ ವಿಚಾರದಲ್ಲೂ ಅಂಥ ಪ್ರಮುಖ ಬೆಳವಣಿಗೆ ಆಗಿರಲಿಲ್ಲ. ವಿಶೇಷ ಸ್ಥಾನಮಾನ ತೆಗೆದಕೂಡಲೇ ಅಲ್ಲಿನ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಎಂಬ ನಿಯಮ ಅನ್ವಯ ಆಗಿತ್ತು. ಆದರೆ ಅದಕ್ಕೆಲ್ಲ ನಿಯಮ, ಗ್ರಾಹಕರಿಗೆ ಭದ್ರತೆ ನೀಡುವ ಕಾರ್ಯ ಆಗಿರಲಿಲ್ಲ. ಹೀಗಿರುವಾಗ ಇಂದು ಗೃಹ ಸಚಿವಾಲಯದ ಆದೇಶ ತುಂಬ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಒನ್​ವೇ ಲವ್​? ನಟಿಯ ಮೇಲೆ ನಿರ್ಮಾಪಕನಿಂದ ಹಲ್ಲೆ

    ಜಮ್ಮು-ಕಾಶ್ಮೀರದಲ್ಲಿ ರೇರಾ ಕಾಯ್ದೆ ಇಂದಿನಿಂದಲೇ ಜಾರಿಯಾಗಲಿದ್ದು, ಇದು ಆ ಪ್ರದೇಶದಲ್ಲಿ ಆಸ್ತಿ ಖರೀದಿ, ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಅಲ್ಲಿ ಇನ್ನು ರಿಯಲ್​ ಎಸ್ಟೇಟ್​ ಉದ್ಯಮ ತೀವ್ರಗತಿ ಪಡೆದುಕೊಳ್ಳಲು ದಾರಿಯಾಗಲಿದೆ.

    ಇದಕ್ಕೂ ಮೊದಲು 35 ಎ ವಿಧಿ ಭಾರತದ ಇತರ ಭಾಗಗಳಿಂದ ನಾಗರಿಕರಿಗೆ ಭೂಮಿ ಖರೀದಿಸುವುದನ್ನು ನಿಷೇಧಿಸಿತ್ತು. ಲೇಖನವು ಜೆ & ಕೆ ಶಾಸಕಾಂಗಕ್ಕೆ ರಾಜ್ಯದ ಖಾಯಂ ನಿವಾಸಿಗಳನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಟ್ಟಿತು ಮತ್ತು ಅರ್ಹರು ಮಾತ್ರ ಭೂಮಿ ಅಥವಾ ಆಸ್ತಿಯನ್ನು ಖರೀದಿಸಬಹುದು. ಇದನ್ನೂ ಓದಿ: ಫೇಸ್​​ಬುಕ್​​ನಲ್ಲಿ ಅವಾಚ್ಯ ಕಾಮೆಂಟ್​; ಸೈಬರ್​ ಕ್ರೈಂಗೆ ದೂರು ನೀಡಿದ ವಿಧಾನ ಪರಿಷತ್​ ಸದಸ್ಯ

    ಈ ಹಿಂದೆ ಇದ್ದ ಆರ್ಟಿಕಲ್​ 35 ಎಯಿಂದಾಗಿ ದೇಶದ ಉಳಿದ ಭಾಗದ ಜನರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸಲು, ಆಸ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಅನುಚ್ಛೇದದ ಅನ್ವಯ ಜಮ್ಮು-ಕಾಶ್ಮೀರದ ಶಾಸಕಾಂಗ ಅಲ್ಲಿನ ಖಾಯಂ ನಿವಾಸಿಗಳನ್ನು ಗುರುತಿಸುತ್ತಿತ್ತು. ಅದರಲ್ಲಿ ಉಳ್ಳವರು ಮಾತ್ರ ಆಸ್ತಿ, ಭೂಮಿ ಖರೀದಿಸಲು ಸಾಧ್ಯವಾಗುತ್ತಿತ್ತು.

    ಒನ್​ವೇ ಲವ್​? ನಟಿಯ ಮೇಲೆ ನಿರ್ಮಾಪಕನಿಂದ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts