ಗುರುಪುರ: ಮುಸ್ಲಿಂ ಸಮುದಾಯದ ಮೇಲಿರುವ ಬಲವಾದ ಕುರುಡು ಪ್ರೇಮದಿಂದ ಮಾಜಿ ಸಚಿವ ರಮಾನಾಥ ರೈ ಅವರು ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಿಂದು ಸಮಾಜ, ಸಂಘಟನೆ ಎಂದರೆ ಅವರಿಗೆ ಅಲರ್ಜಿ ಎಂದು ಶಾಸಕ ಡಾ. ಭರತ್ ಶೆಟ್ಟಿ ಕಿಡಿಕಾರಿದರು.
ಕಾವೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ಹಿಂಸಾಚಾರದ ವಿರುದ್ಧ ಮಂಗಳೂರಿನಲ್ಲಿ ಹಿಂದು ಸೇವಾ ಸಮಿತಿ ಪ್ರತಿಭಟನೆ ನಡೆಸಿದರೆ ರೈಯವರು ಟೀಕಿಸುತ್ತಾರೆ. ಪ್ಯಾಲೆಸ್ತೇನ್ ಪರ ಹೋರಾಟವಾದಾಗ ಅವರು ತಪ್ಪಿಯೂ ಇಂತಹ ಮಾತನಾಡಿಲ್ಲ. ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದರೂ ಹಿಂದು ಸಮಾಜದ ಪರ ಮಾತನಾಡಲಿಲ್ಲ. ಈ ವಿಷಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಚಿವ ಜಮೀರ್ ಅಹ್ಮದ್ ಅವರಿಗೂ ರೈಯವರು ಬುದ್ಧಿವಾದದ ಮಾತು ಹೇಳಿಲ್ಲ ಎಂದರು.
ಹಿಂದು ಸಮಾಜ ಸದಾ ಸಹನೆಯಿಂದ ಇರುತ್ತದೆ ಎಂದುಕೊಂಡಿರುವ ಅವರು ಹಿಂದು ಸಮಾಜಕ್ಕೆ ಉಚಿತ ಸಲಹೆ, ಬುದ್ಧಿವಾದದ ಮಾತುಗಳನ್ನಾಡುತ್ತಾರೆ. ಇದನ್ನೆಲ್ಲ ನಿಲ್ಲಿಸಿ ಇತರ ಸಮಾಜದ ತಪ್ಪು ತಿದ್ದುವ ಅಥವಾ ಅವರಿಗೆ ಬುದ್ಧಿವಾದದ ಮಾತನಾಡುವ ಧೈರ್ಯ ತೋರಿಸಿ ಎಂದು ಡಾ.ಭರತ್ ಶೆಟ್ಟಿ ಅವರು ರೈಯವರಿಗೆ ತಿರುಗೇಟು ನೀಡಿದರು.
ನೇತ್ರಾವತಿಗೆ 7ನೇ ಸೇತುವೆ: ಸಜೀಪನಡು-ತುಂಬೆ ನಡುವೆ ನಿರ್ಮಾಣ : ಈಡೇರಿದ ಗ್ರಾಮಸ್ಥರ ಬಹುದಿನದ ಬೇಡಿಕೆ
ಆಶೀರ್ವಾದ ಪಡೆಯಲು ಪ್ರಾರ್ಥನೆ ಮುಖ್ಯ :ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ತ ಹೇಳಿಕೆ