ಭಾರತ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಗೌರಿತಾ : ಯೋಗದಲ್ಲಿ ಅತಿ ಹೆಚ್ಚು ದಾಖಲೆ ಹಿನ್ನೆಲೆ

New Project (2)
Published on

ಸುಬ್ರಹ್ಮಣ್ಯ: ಯೋಗಾಸನದಲ್ಲಿ ಒಟ್ಟು ಮೂರು ರಾಷ್ಟ್ರೀಯ ದಾಖಲೆ ಹಾಗೂ 11 ವಿಶ್ವ ದಾಖಲೆಯನ್ನು 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಬ್ರಹ್ಮಣ್ಯ ಸಮೀಪದ ಮಲೆಯಾಳದ ಪುಟ್ಟ ಬಾಲಕಿ ಗೌರಿತಾ ಕೆ.ಜಿ. ಮಾಡಿದ್ದಾರೆ. ಈ ದಾಖಲೆಗಳ ಹಿನ್ನೆಲೆಯಲ್ಲಿ ಅತ್ಯಂತ ಕಿರಿಯ ವಯಸಿನಲ್ಲಿ ಅತಿ ಹೆಚ್ಚು ದಾಖಲೆ ಮಾಡಿ ಭಾರತ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಡಾ.ಗೌತಮ್ ಕೆ.ವಿ. ಹಾಗೂ ಡಾ.ರಾಜೇಶ್ವರಿ ಎಂ.ಎಂ. ಅವರ ಪುತ್ರಿಯಾಗಿರುವ ಗೌರಿತಾ ಪ್ರಸ್ತುತ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾರೆ. ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಯೋಗ ಅಭ್ಯಾಸ ಮಾಡುತ್ತಿರುವ ಈಕೆ ಶರತ್ ಮರ್ಗಿಲಡ್ಕ ಅವರ ಶಿಷ್ಯೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net