

ಬೆಂಗಳೂರು: ಇಂದು ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ಅವರಿಗೆ ಶುಭ ಹಾರೈಸಿವೆ. ಈ ಪೈಕಿ 'ಭಜರಂಗಿ 2' ಚಿತ್ರತಂಡವು ಶಿವರಾಜಕುಮಾರ್ ಅವರ ವಿಶೇಷ ಟೀಸರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ನಟ ಸುನೀಲ್ ಶೆಟ್ಟಿ ಅಪಾರ್ಟ್ಮೆಂಟ್ ಸೀಲ್!
ಸೋಮವಾರ ಬೆಳಿಗ್ಗೆ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ 'ಭಜರಂಗಿ 2' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಒಳ್ಳೆಯ ವೀಕ್ಷಣೆ ಪಡೆಯುತ್ತಿದೆ. ಬಿಡುಗಡೆಯಾದ ಎರಡು ತಾಸಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
'ಭಜರಂಗಿ 2' ಚಿತ್ರದ ಚಿತ್ರೀಕರಣ ಕಳೆದ ವರ್ಷ ಮೊದಲ ಲಾಕ್ಡೌನ್ಗೂ ಮೊದಲೇ ಬಹುತೇಕ ಮುಗಿದಿತ್ತು. ಇನ್ನು, ಲಾಕ್ಡೌನ್ ನಂತರ ಉಳಿದ ಭಾಗದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಆಗಿ, ಚಿತ್ರ ಮೇನಲ್ಲಿ ಬಿಡುಗಡೆ ಎಂದು ನಿರ್ಮಾಪಕ ಜಯಣ್ಣ ಘೋಷಿಸಿದ್ದರು. ಆದರೆ, ಎರಡನೆಯ ಲಾಕ್ಡೌನ್ನಿಂದಾಗಿ ಚಿತ್ರ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಚಿತ್ರಪ್ರದರ್ಶನ ಪ್ರಾರಂಭವಾಗಿ, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ಚಿತ್ರ ಬಿಡುಗಡೆ ಆಗಲಿದೆ. ಬಹುಶಃ ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಎ. ಹರ್ಷ ನಿರ್ದೇಶನದ 'ಭಜರಂಗಿ 2' ಚಿತ್ರದಲ್ಲಿ ಶಿವರಾಜಕುಮಾರ್ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದು, ಮಿಕ್ಕಂತೆ ಶ್ರುತಿ, 'ಭಜರಂಗಿ' ಲೋಕಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಸ್ವಾಮಿ ಗೌಡ ಛಾಯಾಗ್ರಹಣ ಮಾಡಿದ್ದಾರೆ.