ಗುರುವಾಯನಕೆರೆಯಲ್ಲಿ ಭಜನಾ ಪರಿಷತ್ ಸಭೆ

New Project (15)
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆಯ ಸಭೆ ಗುರುವಾಯನಕೆರೆಯಲ್ಲಿ ನಡೆಯಿತು.

ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷರಾಗಿ ಜಗದೀಶ್ ಶೆಟ್ಟಿ ಮೈರಾ ಕರಾಯ, ಕಾರ್ಯದರ್ಶಿಯಾಗಿ ಸಂದೇಶ್ ಮದ್ದಡ್ಕ, ಉಪಾಧ್ಯಕ್ಷರಾಗಿ ಜಯರಾಜ್ ಬಂಗೇರ ಮುಂಡೂರು, ಜತೆ ಕಾರ್ಯದರ್ಶಿಗಳಾಗಿ ಸಂತೋಷ್ ಪೂಜಾರಿ, ಕೋಶಾಧಿಕಾರಿಯಾಗಿ ಸೋಮನಾಥ ಶಿರ್ಲಾಲು ಆಯ್ಕೆಯಾದರು.

ವೆಂಕಟೇಶ್ ಭಟ್ ಕಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕ ದಿನೇಶ್ ಭಜನಾ ಪರಿಷತ್ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಮಟ್ಟದಲ್ಲಿ ಎಲ್ಲ ಭಜನಾ ಮಂಡಳಿ ಸದಸ್ಯರು, ಯೋಜನೆಯ ಒಕ್ಕೂಟದ ಸದಸ್ಯರು ಸೇರಿ ಆಷಾಢ ತಿಂಗಳಿನಲ್ಲಿ ಕಾರ್ಯಕ್ರಮ ನಡೆಸುವ ಕುರಿತು ವಿವರಿಸಿದರು.

ಹವ್ಯಕ ಭವನ ಅಧ್ಯಕ್ಷ ಎಂ.ಪರಮೇಶ್ವರ ಭಟ್ ಎರಡಿಕಾನ, ಕಾರ್ಯದರ್ಶಿಗಳಾದ ವೆಂಕಪ್ಪಯ್ಯ ಕುಕ್ಕಜೆ, ಗುರುವಾಯನಕೆರೆ ವಲಯ ಅಧ್ಯಕ್ಷೆ ಮೀನಾಕ್ಷಿ, ವಲಯ ಮೇಲ್ವಿಚಾರಕಿ ಯಶೋದಾ, ಕೃಷಿ ಮೇಲ್ವಿಚಾರಕ ಕೃಷ್ಣ, ತಾಲೂಕಿನ ಎಲ್ಲ ವಲಯ ಭಜನಾ ಪರಿಷತ್ತಿನ ಪದಾಧಿಕಾರಿಗಳು, ಭಜನಾ ಮಂಡಳಿ ಸದಸ್ಯರು, ತಾಲೂಕು ಕೃಷಿ ಅಧಿಕಾರಿ, ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಅಶೋಕ್ ಸ್ವಾಗತಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net