ಪರಾರಿಯಾಗಲೆತ್ನಿಸಿದ ಯುವಕನ ಬಂಧನ

arrested
Published on

ಕಾಸರಗೋಡು: ಬೇಕಲ ತಚ್ಚಂಗಾಡಿನ ಶಾಲಾ ವಠಾರದ ಅಂಗಡಿಯೊಂದರಿಂದ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಸಂದರ್ಭ ಪರಾರಿಯಾಗಲೆತ್ನಿಸಿದ ವ್ಯಕ್ತಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಬೇಕಲ ತಾಯಲ್ ಮವ್ವಲ್ ನಿವಾಸಿ, ತಚ್ಚಂಗಾಡ್ ಅರವತ್‌ನಲ್ಲಿ ವಾಸಿಸುತ್ತಿರುವ ಪಿ.ಕೆ.ಮಹಮ್ಮದ್ ಸಫ್ವಾನ್ ಬಂಧಿತ. ಪಳ್ಳಿಕೆರೆ ಪಂಚಾಯಿತಿ ಸಿಡಿಎಸ್ ವತಿಯಿಂದ ನಡೆಸುವ ತಚ್ಚಂಗಾಡ್ ಶಾಲೆ ಸನಿಹದ ಅಂಗಡಿಯಿಂದ ಜೂನ್ 19ರಂದು ರಾತ್ರಿ 25 ಸಾವಿರ ರೂ. ಮೌಲ್ಯದ ಸಾಮಗ್ರಿ ಹಾಗೂ 1 ಸಾವಿರ ರೂ. ಕಳವುಗೈದಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಯನ್ವಯ ಸಫ್ವಾನ್‌ನನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ತೆಗೆದು ಠಾಣೆಗೆ ಕರೆದೊಯ್ದು ಕುಳ್ಳಿರಿಸಿದ್ದರು. ಈ ವೇಳೆ ಪರಾರಿಯಾಗಲೆತ್ನಿಸಿದ ಈತನನ್ನು ಮಲಾಂಕುನ್ನು ರೈಲ್ವೆ ಹಳಿ ಸನಿಹದಿಂದ ಮತ್ತೆ ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net