

ಹೆಬ್ರಿ: ಹಿರಿಯಡ್ಕದ ವಾಣೈಮಠ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀ ಆಂಜನೇಯ ಭಜನಾ ಮಂಡಳಿ, ವಾಣೈ ಕುಣಿತ ಭಜನಾ ಮಂಡಳಿಯನ್ನು ಪ್ರಧಾನ ಅರ್ಚಕ ವಾಧವ ಉಪಾಧ್ಯಾಯ ಉದ್ಘಾಟಿಸಿದರು.
ಭಜನಾ ಮಂಡಳಿಯಿಂದ ಕುಣಿತ ಭಜನಾ ಸೇವೆ, ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ರಾವೇಂದ್ರ ಆಚಾರ್ಯ, ಶಶಿಕಲಾ ಅವರನ್ನು ಗೌರವಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ತರಬೇತುದಾರ ರೋಹಿತ್ ಕಬ್ಯಾಡಿ, ಪ್ರಮುಖರಾದ ಗೋಕುಲದಾಸ್ ನಾಯಕ್ ಕೊಂಡಾಡಿ, ಸುಧೀರ್ ನಾಯಕ್, ಜಯಶ್ರೀ ಸುಧೀರ್ ನಾಯಕ್, ಮಮತಾ, ಸಾಕ್ಷಿ ಮೂಲ್ಯ, ಗೀತಾ, ನಾಗರತ್ನಾ, ಅಕ್ಷಯ್ ಆಚಾರ್ಯ ಉಪಸ್ಥಿತರಿದ್ದರು.