ಉಳ್ಳಾಲ: ಶ್ರೀ ರವಾನಂದ ಸ್ವಾಮೀಜಿ ಅವರಿಂದ ಸ್ಥಾಪಿಸಲ್ಪಟ್ಟು ಆರಾಧಿಸಲ್ಪಟ್ಟ ಶ್ರೀ ಕ್ಷೇತ್ರ ಕೊಲ್ಯದಲ್ಲಿ ನೆಲೆಸಿರುವ ತಾಯಿ ಮೂಕಾಂಬಿಕೆಯ ದಿವ್ಯ ಸಾನಿಧ್ಯದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅ.3ರಿಂದ 13ರವರೆಗೆ ದೇವತಾ ವಿಧಿವಿಧಾನಗಳನ್ನು ಒಳಗೊಂಡು ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಜಗದ್ಗುರು ರವಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೆಬಲ್ ಟ್ರಸ್ಟ್ ಕೋಶಾಧಿಕಾರಿ ಕೃಷ್ಣಮೂರ್ತಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿಕಥೆ, ಯಕ್ಷಗಾನ, ಭರತನಾಟ್ಯ, ಭಕ್ತಿ ರಸಮಂಜರಿ, ವಾತೃಮಂಡಳಿ ಹಾಗೂ ಹೊಲಿಗೆ ತರಬೇತಿಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರದ ಮಕ್ಕಳ ಪ್ರತಿಭೆಗಳ ಅನಾವರಣ, ಅಂಗನವಾಡಿ ಮಕ್ಕಳ ನೃತ್ಯ ಕಾರ್ಯಕ್ರಮ, ಕುಣಿತ ಭಜನೆ, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು ಎಂದರು.
ಅ.12ರಂದು ಆಯುಧ ಪೂಜೆ, 13ರಂದು ಮಕ್ಕಳಿಗೆ ವಿದ್ಯಾರಂಭ, ಬೆಳಗ್ಗೆ ಲೋಕ ಕಲ್ಯಾಣಾರ್ಥ ಸಾಮೂಹಿಕ ಚಂಡಿಕಾಹವನ, ಸಂಜೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ವಾಡಿರುವ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುವಾರ್‌ಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಕುಂಪಲ, ಟ್ರಸ್ಟಿಗಳಾದ ಗೋಪಾಲ ಕುತ್ತಾರ್, ರಾಧಾಕೃಷ್ಣ ಶೆಟ್ಟಿ, ಶಿವಾನಂದ ಮೆಂಡನ್, ಗುಣವತಿ ಆಚಾರ್, ವಾತೃ ಮಂಡಳಿ ಅಧ್ಯಕ್ಷೆ ಸುಲೋಚನಿ ಸುದ್ದಿಗೋಷ್ಠಿಯಲ್ಲಿದ್ದರು.