ಎಚ್ಚರ! ಮಕ್ಕಳ ಬಗ್ಗೆ ಜಾಲತಾಣಗಳಲ್ಲಿ ವಿವರ ಶೇರ್​ ಮಾಡಬೇಡಿ

childhelpline
Published on

ಬೆಂಗಳೂರು : ಇತ್ತೀಚೆಗೆ ಎಲ್ಲದಕ್ಕೂ ಸಾಮಾಜಿಕ ಮಾಧ್ಯಮದ ಸಹಾಯ ಪಡೆಯುವುದು ವಾಡಿಕೆಯಾಗಿ ಬಿಟ್ಟಿದೆ. ರಕ್ತ, ಆಕ್ಸಿಜನ್, ಮುಂತಾದ ವೈದ್ಯಕೀಯ ಅಗತ್ಯಗಳ ಬಗ್ಗೆ ಜಾಲತಾಣದಲ್ಲಿ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಜೊತೆಗೆ, ಕರೊನಾದಿಂದ ಅನಾಥರಾದ ಮಕ್ಕಳ ಕುರಿತು ಸಹಾಯ ಕೋರಿ ಹಲವು ಸಂದೇಶಗಳು ಓಡಾಡಿದ್ದೂ ಉಂಟು.

ಈ ರೀತಿಯ ಸಂದೇಶ ಬಂದರೆ, ಯಾರಾದರೂ ಸಹಾಯ ಮಾಡುವವರನ್ನು ತಲುಪುತ್ತದೆ ಎಂಬ ಉದ್ದೇಶದಿಂದ ಅನೇಕ ಜನರು ಇವನ್ನು ಹಲವು ಗುಂಪುಗಳಿಗೆ ಫಾರ್ವರ್ಡ್​ ಮಾಡುತ್ತಾ ಇರುತ್ತಾರೆ. ಆದರೆ, ಈ ರೀತಿ ಜಾಲತಾಣದಲ್ಲಿ ಮಕ್ಕಳ ವಿವರಗಳನ್ನು ಹಾಕುವುದರಿಂದ ಅವರಿಗೆ ಅಪಾಯ ಉಂಟಾಗಬಹುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಸಿದೆ.

"ದಯವಿಟ್ಟು ತೊಂದರೆಯಲ್ಲಿರುವ ಮಕ್ಕಳ ಭಾವಚಿತ್ರಗಳನ್ನು ಮತ್ತು ಸಂಪರ್ಕದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಏಕೆಂದರೆ ಇದರಿಂದ ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ನೇರವಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ, ಮಾಹಿತಿ ನೀಡಿ" ಎಂದು ಇಲಾಖೆ ಟ್ವೀಟ್ ಮಾಡಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net