

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ನಡುವೆಯೇ ಮಹಾಮಾರಿ ಕರೊನಾ ವೈರಸ್ ಸಂಕಷ್ಟದಲ್ಲಿ ಮುಷ್ಕರ ಸರಿಯಲ್ಲ ಎಂದು ಸಾರಿಗೆ ನೌಕರರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ.
ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದರೂ ನಮಗೆ ಸಂಬಳ ನೀಡಿದ್ದಾರೆ. ನಿಯತ್ತು ಅಥವಾ ಮನಃಸಾಕ್ಷಿ ಇದ್ದವರು ಸೇವೆ ಮಾಡಬೇಕು ಎಂದಿರುವ ಬಿಎಂಟಿಸಿ ಬಸ್ ಚಾಲಕ, ಸೇವೆಗೆ ಹಾಜರಾಗುವ ಮೂಲಕ ಕರ್ತವ್ಯ ನಿಷ್ಠೆ ಮರೆದಿದ್ದಾರೆ.
ಕರೊನಾ ಸಂಕಷ್ಟ ಸಮಯದಲ್ಲಿ ದುಡ್ಡೇ ಇಲ್ಲ ಅಂದಾಗ ಎಲ್ಲಿಂದ ಕೊಡುತ್ತಾರೆ. ಮೂರು ತಿಂಗಳು ನೀವು ಮನೆಯಲ್ಲಿದ್ದಾಗ ಈ ಸಂಸ್ಥೆ ನಿಮ್ಮ ಸಂಸಾರವನ್ನು ಸಾಕಿದೆ. ಈ ಋಣಕ್ಕಾದರೂ ಬಂದು ಸೇವೆ ಸಲ್ಲಿಸಿ ಎಂದರು.
ಮುಷ್ಕರದ ದಿನ ಬಸ್ ಓಡಿಸಿದವರಿಗೆ ಚಪ್ಪಲಿ ಹಾರ ಹಾಕುವ ವಿಚಾರವಾಗಿ ಮಾತನಾಡಿ, ನನ್ನ ಹೆಸರು ತ್ಯಾಗರಾಜು, ನಾನೇ ಆಹ್ವಾನ ಮಾಡುತ್ತಿದ್ದೇನೆ. ಖಂಡಿತವಾಗಿ ಹಾರ ಹಾಕಬಹುದು. ನಾನು ಸಾರ್ವಜನಿಕ ಸೇವೆಗೆಂದು ಬಂದಿದ್ದೇನೆ. ಅದಕ್ಕಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವುದಕ್ಕೂ ನಾನು ರೆಡಿ ಎಂದು ತ್ಯಾಗರಾಜು ಅವರು ಸವಾಲು ಹಾಕಿದರು.