ಬೆಂಗ್ಳೂರಿನಲ್ಲಿ ಹಾಡಹಗಲೇ ಯುವಕನನ್ನು ಬೆದರಿಸಿ, ಮೊಬೈಲ್​ ಕಸಿದು ಮೂವರು ದುಷ್ಕರ್ಮಿಗಳು ಪರಾರಿ!

Mobile Snatch
Published on

ಬೆಂಗಳೂರು: ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಹಾಡಹಗಲೇ ಯುವಕನೊಬ್ಬನನ್ನು ಬೆದರಿಸಿ, ಮೊಬೈಲ್​ ಕಸಿದು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಬಳಿ ಇರುವ ರಾಮಚಂದ್ರಪುರದ ದೇವಿಕಾ ಬೇಕರಿ ಎದುರು ನಡೆದಿದೆ.

ಸಂತ್ರಸ್ತ ಯುವಕ ಟೀ ಕುಡಿಯಲೆಂದು ಬೇಕರಿ ಬಳಿ ನಿಂತಿದ್ದ. ಈ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ದುರುಳರು ಮೊಬೈಲ್ ರಾಬರಿ ಮಾಡಿ ಪರಾರಿಯಾಗಿದ್ದಾರೆ. ದೋಚುವ ಮುನ್ನ ಸುತ್ತಮುತ್ತ ವೀಕ್ಷಣೆ ಮಾಡಿರುವ ದುಷ್ಟರು, ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೃತ್ಯ ಎಸಗಿದ್ದಾರೆ.

ಯುವಕ ಎಷ್ಟೇ ಬೇಡಿಕೊಂಡರೂ ಬಿಡದ ಆಗಂತುಕರು ಮೊಬೈಲ್ ದೋಚಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ಇಂತಹ ಘಟನೆ ನಡೆದಿರುವುದು ಪೊಲೀಸ್​ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net