ಪೊಲೀಸರ ಬೆಂಬಲದೊಂದಿಗೆ ಮದ್ವೆಯಾಗಿ ಹೊಸ ಜೀವನ ಆರಂಭಿಸಿದ ಇಬ್ಬರು ಮಹಿಳಾ ಮಾವೋವಾದಿಗಳು!

Odisha Maoists
Published on

ಭುವನೇಶ್ವರ್​​: ಪೊಲೀಸರ ಮುಂದೆ ಶರಣಾದ ಇಬ್ಬರು ಮಹಿಳಾ ಮಾವೋವಾದಿಗಳು ಪೊಲೀಸರ ಬೆಂಬಲದೊಂದಿಗೆ ಮದುವೆಯಾಗಿರುವ ಘಟನೆ ಒಡಿಶಾದ ಕಂದಮಾಲ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಮಹಿಳಾ ಮಾವೋವಾದಿಗಳಾಗಿದ್ದ ಸಪ್ನಿತಾ ಪತಮಾಹಿ ಅಲಿಯಾಸ್​ ನಂದಿನಿ ಮತ್ತು ಫುಲಬತಿ ಉಸೆಂದಿ ಅಲಿಯಾಸ್​ ಕರುಣಾ, ತಾವೇ ಆರಿಸಿಕೊಂಡ ಜೀವನ ಸಂಗಾತಿಯ ಜತೆ ಪೊಲೀಸರ ಬೆಂಬಲದೊಂದಿಗೆ ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.

2019ರಲ್ಲಿ ಕಂದಮಾಲ್​ ಪೊಲೀಸ್​ ವರಿಷ್ಠಾಧಿಕಾರಿ ಮುಂದೆ ಶರಣಾಗುವ ಮುನ್ನ ಸಪ್ನಿತಾ ಪತಮಾಹಿ ಸುಮಾರು ಒಂದೂವರೆ ವರ್ಷಗಳ ಕಾಲ ಮಾವೋವಾದಿ ಆಗಿದ್ದಳು. ಅದೇ ರೀತಿ ಸುಮಾರು 13 ವರ್ಷಗಳ ಕಾಲ ಮಾವೋವಾದಿಯಾಗಿದ್ದ ಫುಲಬತಿ ಉಸೆಂದಿ 2021ರಲ್ಲಿ ಡಿಜಿ ಪೊಲೀಸ್​ ಮುಂದೆ ಶರಣಾಗಿದ್ದಳು.

ಸರ್ಕಾರಿ ಯೋಜನೆ ಅನುಸಾರ ನಂದಿನಿ ಮತ್ತು ಕರುಣಾಗೆ ಒಡಿಶಾ ರಾಜ್ಯದ ಪೊಲೀಸರು ಪುನರ್ವಸತಿ ಕಲ್ಪಿಸಿಕೊಟ್ಟಿದ್ದರು. ಇದೀಗ ಇಬ್ಬರಿಗೂ ಮದುವೆ ಮಾಡಿಸುವ ಮೂಲಕ ಮಾವೋವಾದಿಗಳಾಗಿದ್ದ ಮಹಿಳೆಯರಿಬ್ಬರ ಬದುಕಲ್ಲಿ ಹೊಸ ಜೀವನ ಆರಂಭವಾಗುವಂತೆ ಮಾಡಿದ್ದಾರೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net