ಬ್ರೈನ್ ಟ್ಯೂಮರ್​ ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿರ್ದೇಶಕ ಮುರಳಿ ಕೃಷ್ಣ ವಿಧಿವಶ

Muruali Krishna
Published on

ಬೆಂಗಳೂರು: ಬ್ರೈನ್ ಟ್ಯೂಮರ್​ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ನಿರ್ದೇಶಕ ಕೆ.ಆರ್​. ಮುರಳಿ ಕೃಷ್ಣ (63) ಅವರು ಹೃದಯಾಘಾತದಿಂದ ನಿನ್ನೆ (ನ.14) ರಾತ್ರಿ 7.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಮುರುಳಿ ಕೃಷ್ಣ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ತಡವಾಗಿ ಬೆಳಕಿಗೆ ಬಂದಿತ್ತು. ಸಿಟಿ ಸ್ಕ್ಯಾನ್ ಮಾಡಿಸಿದ ಬಳಿಕ ಟ್ಯೂಮರ್ ಪತ್ತೆಯಾಗಿತ್ತು. ಕೂಡಲೇ ಲಾಲ್ ಬಾಗ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಮುರಳಿ ಕೃಷ್ಣ ಅವರು ಇಬ್ಬರು ಹೆಣ್ಣು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. 2019ರಲ್ಲಿ ತೆರೆಕಂಡ ತಾವು ನಿರ್ದೇಶಿದ ಗರ ಸಿನಿಮಾಗಾಗಿ ಬಾಲಿವುಡ್​ನ ಖ್ಯಾತ ಹಾಸ್ಯ ಕಲಾವಿದ ಜಾನಿ ಲಿವರ್ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ವೃತ್ತಿಯಲ್ಲಿ ವಕೀಲರಾದರೂ, ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿದ್ದರು.

ಮುರಳಿ ಕೃಷ್ಣ ಅವರ ಪಾರ್ಥೀವ ಶರೀರವನ್ನು ಸಹಕಾರ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದು ಮಧ್ಯಾಹ್ನ 12:30ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮುರುಳಿ ಕೃಷ್ಣ ಅವರು "ಸಣ್ಣ ಸತ್ಯ" ಮತ್ತು "ಗರ" ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಅಲ್ಲದೆ, ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net