ಅವಕಾಶಗಳ ತವರು ಬೆಂಗಳೂರು; ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅಭಿಮತ

RRC
Published on

ಬೆಂಗಳೂರು :ದೇಶದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಬೆಂಗಳೂರನ್ನು ಮೀರಿಸುವ ನಗರ ಇನ್ನೊಂದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ

ಬೆಂಗಳೂರಿನ ಚಿಕ್ಕಬಾಣಾವರದ ಆರ್‌ಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಬೆಂಗಳೂರಿನಲ್ಲಿ ಎಲ್ಲ ಬಗೆಯ ತಂತ್ರಜ್ಞಾನ ಕ್ಷೇತ್ರಗಳಿವೆ. ಐಟಿ,ಬಿಟಿ, ಏರೋ ಸ್ಪೇಸ್, ಹಣಕಾಸು, ವೈದ್ಯಕೀಯ ಎಲ್ಲದರಲ್ಲೂ ಅತ್ಯುನ್ನತ ಸಾಧನೆ ಮಾಡಿರುವ ನಗರವಿದು. ನಿಮ್ಮ ಕನಸು-ಉದ್ದೇಶ ಈಡೇರಿಸಿಕೊಳ್ಳಲು ಇದಕ್ಕಿಂತ ಪ್ರಶಸ್ತ ಜಾಗ ಬೇರೊಂದಿಲ್ಲ. ಹಿಡಿದ ಕೆಲಸ ಸಾಧಿಸಲು ನಿಮಗೆ ನೀವೇ ಸಹಾಯ ಮಾಡಿಕೊಳ್ಳಬೇಕು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪೂನ್ ಫೀಡಿಂಗ್ ವ್ಯವಸ್ಥೆ ಇರುವುದಿಲ್ಲ, ಮಾರ್ಗದರ್ಶನವಿರುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ಶಿಕ್ಷಣ ಕ್ಷೇತ್ರ ಅತ್ಯಂತ ವೇಗವಾಗಿ ಬದಲಾಗುತ್ತಿದೆ ಅದಕ್ಕನುಗುಣವಾಗಿ ಶಿಕ್ಷಣ ನೀಡುವ ಕಾಲೇಜುಗಳು ಅಪ್ಡೇಟ್ ಆಗಬೇಕು. ಈ ವಿಷಯದಲ್ಲಿ ಆರ್.ಆರ್.ಶಿಕ್ಷಣ ಸಮೂಹ ಅತ್ಯಂತ ಗುಣಮಟ್ಟದ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಆರ್.ಆರ್.ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಜಾರೆಡ್ಡಿ, ಎಚ್‌ಎಎಲ್ ಜನರಲ್ ಮ್ಯಾನೇಜರ್ ಪಿ.ವಾಂಗ್ ಚುಕ್, ಕಾರ್ಯದರ್ಶಿ ಕಿರಣ್ ಹೆಚ್.ಆರ್, ನಿರ್ದೇಶಕ ಅರುಣ್ ಹೆಚ್.ಆರ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ವಿ.ಮಹೇಂದ್ರ, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net