ಭಾರಿ ಮಳೆಯಿಂದಾಗಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಬಿದ್ದ ಮರ: ಸ್ಥಳದಲ್ಲೇ ಮಹಿಳೆ ಸಾವು

Woman Death
Published on

ಬೇಗೂರು: ಬೆಂಗಳೂರಿನಲ್ಲಿ ಇಂದು ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮತ್ತೊಬ್ಬ ಮಹಿಳೆ ಸಾವಿಗೀಡಾಗಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ಬೇಗೂರಿನಲ್ಲಿ ನಡೆದಿದೆ.

ಹೇಮಾ (49) ಮೃತ ದುರ್ದೈವಿ. ಭಾರಿ ಮಳೆಗೆ ಮರವೊಂದು ಧರೆಗೆ ಉರುಳಿದ್ದಲ್ಲದೆ, ಸ್ಕೂಟಿಯ ಚಲಿಸುತ್ತಿದ್ದ ಹೇಮಾ ಅವರ ಮೇಲೆಯೂ ಬಿದ್ದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದಕ್ಕೂ ಮುನ್ನ ಹೇಮಾ ಅವರನ್ನು ಕಂಡು ಸಹಾಯಕ್ಕಾಗಿ ಸುತ್ತಮುತ್ತಲಿನ ಜನ ಧಾವಿಸಿ ಬಂದರೂ ಸಹ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಮಹಿಳೆ ಸಾವು

ಮತ್ತೊಂದು ಘಟನೆಯಲ್ಲಿ ಭಾರಿ ಮಳೆಯಿಂದ ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್​ ಇಟ್ಟಿಗೆ ಬಿದ್ದು ನಗರದ ರಾಮಣ್ಣ ಬ್ಲಾಕ್ ನಂದಿನಿ ಲೇಟೌಟ್​ನಲ್ಲಿ ಶಿಲ್ಪಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net