ಮನೆ ಊಟ ಬೇಕೆಂದ ಅಪರಿಚಿತ ವ್ಯಕ್ತಿಗೆ ರಾಗಿ ಮುದ್ದೆ, ಚಿಕನ್ ಸಾಂಬಾರ್ ಬಡಿಸಿ ಸತ್ಕರಿಸಿದ ಬೆಂಗಳೂರಿನ ಕುಟುಂಬ | Bengaluru

Bengaluru
Published on

Bengaluru: ಇತ್ತೀಚಿನ ದಿನಗಳಲ್ಲಿ ನಾವು ಕರ್ನಾಟಕದಲ್ಲಿ ಭಾಷೆಗಾಗಿ ವಿವಾದ ನಡೆದ ಅನೇಕ ವಿಡಿಯೋ, ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡಿರುತ್ತೇವೆ. ಆದರೆ ಇದನ್ನೂ ಮೀರಿ ಗುರುತುಪರಿಚಯ ಇಲ್ಲದ ದೆಹಲಿ ಮೂಲದ ವ್ಯಕ್ತಿಗೆ ಬೆಂಗಳೂರಿನ ಕುಟುಂಬವೊಂದು ಮನೆಯೂಟ ಮಾಡಿ ಬಡಿಸಿದ ಹೃದಯಸ್ಪರ್ಶಿ ವಿಡಿಯೋ ಇದೀಗ ವೈರಲ್​​ ಆಗಿದೆ. ಹಾಗಾದ್ರೆ ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ದೆಹಲಿಯ ವ್ಯಕ್ತಿ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಸದೀವ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ.

ಸದೀಶ್ ಸಿಂಗ್ ಅವರು ಬೆಂಗಳೂರಿನ ಮನೆಯಲ್ಲಿ ಮನೆಯೂಟದ ರುಚಿ ಸವಿಯಬೇಕು ಎನ್ನುವ ಆಸೆಯನ್ನು ಹೊಂದಿದ್ದರು, ಹೀಗಿರುವಾಗ ಸಿಂಗ್​​ ರಸ್ತೆಯಲ್ಲಿ ಸಿಂಗ್​​ ಓಡಾಡುತ್ತಾ ಒಂದು ಮನೆಗೆ ತಲುಪಿದ್ದಾರೆ. ಆ ಮನೆಯ ಗೇಟ್​​​ ಬಳಿ ನಿಂತು ವಿನಮ್ರವಾಗಿ, "ಮೇಡಂ, ನಾನು ದೆಹಲಿವನು ಮತ್ತು ನಾನು ಸಾಂಪ್ರದಾಯಿಕ ಸ್ಥಳೀಯ ಉಪಹಾರವನ್ನು ಪ್ರಯತ್ನಿಸಲು ಇಷ್ಟಪಡುತ್ತೇನೆ. ನಾನು ನಿಮ್ಮ ಮನೆಯಲ್ಲಿ ತಿನ್ನಬಹುದೇ?" ಎಂದು ಆ ಮನೆಯ ಮಹಿಳೆಯ ಬಳಿ ಕೇಳುತ್ತಾರೆ.

ಆ ಮಹಿಳೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೇ ಒಳಗೆ ಹೋಗಿ ಕೇಳಿ ಬರುತ್ತೇನೆ ಎಂದು ಹೇಳಿ, ಕೆಲವು ಕ್ಷಣಗಳ ನಂತರ, ಮನೆಯ ಪುರುಷ ಹೊರಬಂದು ಸಿಂಗ್ ಅವರನ್ನು ನಗುವಿನೊಂದಿಗೆ ಸ್ವಾಗತಿಸುತ್ತಾರೆ.

ಸಿಂಗ್​​​ ಅವರಿಗೆ ಆ ಕುಟುಂಬವು ಬಿಸಿಬಿಸಿಯಾದ ರಾಗಿ ಮುದ್ದೆ ಜೊತೆ ಚಿಕನ್ ಸಾಂಬಾರ್ ಬಡಿಸುತ್ತಾರೆ. ಆ ರುಚಿಯಾದ ಊಟವನ್ನು ಹೊಟ್ಟೆ ತುಂಬಾ ತಿಂದು ಸದೀಶ್​​​, ಆ ಕುಟುಂಬದ ಮಹಿಳೆಯ ಪಾದಗಳಿಗೆ ನಮಸ್ಕರಿಸುತ್ತಾರೆ.

ಊಟ ತುಂಬಾನೇ ಚೆನ್ನಾಗಿತ್ತು, ನಿಜವಾಗಿಯೂ ಬೆಂಗಳೂರಿನ ಜನ ತುಂಬಾನೇ ಒಳ್ಳೆಯವರು ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.

ಈ ವೈರಲ್​ ವಿಡಿಯೋ 33 ಲಕ್ಷಕ್ಕೂ ಅಧಿಕ ವೀಕ್ಷಣೆಯ ಜೊತೆಗೆ ನಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, "ಇದು ನನಗೆ ತುಂಬಾ ಸಂತೋಷ ತಂದಿದೆ. ನೀವು ಅವರನ್ನು ಭೇಟಿ ಮಾಡಿರುವುದು ಅವರಿಗೆ ಅಪಾರ ಸಂತೋಷ ತಂದಿರಬೇಕು. ದಯವಿಟ್ಟು ಅವರನ್ನು ಮತ್ತೆ ಭೇಟಿ ಮಾಡಲು ಪ್ರಯತ್ನಿಸಿ " ಎಂದರೆ, ಮತ್ತೊಬ್ಬರು "ಬಹುಶಃ ಅವರ ಸ್ವಂತ ಮಕ್ಕಳು ದೂರದಲ್ಲಿ ವಾಸಿಸುತ್ತಿರಬಹುದು. ಅವರು ನಿಮ್ಮಲ್ಲಿ ತಮ್ಮ ಮಗನನ್ನು ಕಂಡಿರಬಹುದು. ಅವರೊಂದಿಗೆ ಸಮಯ ಕಳೆದಿದ್ದಕ್ಕಾಗಿ ಧನ್ಯವಾದಗಳು" ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net