ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ

terminal 2
Published on

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ ಮತ್ತು ‘ಇಂಟೀರಿಯರ್‌ 2023 ರ ವಿಶ್ವ ವಿಶೇಷ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ 2 ಯುನೆಸ್ಕೋದ 2023 ಪ್ರಿಕ್ಸ್ ವರ್ಸೇಲ್ಸ್‌ನಿಂದ ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದಿದೆ. ಈ ಮನ್ನಣೆಯನ್ನು ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದೆ ಎಂದು ಕೆಐಎ ನಿರ್ವಹಿಸುವ ಬಿಐಎಎಲ್ ಹೇಳಿದೆ.

ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ಅವರ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023ರ ವರ್ಲ್ಡ್ ಜಡ್ಜಲ್‌ ಪ್ಯಾನೆಲ್ ಪ್ರಶಸ್ತಿಯನ್ನು ಗೆಲ್ಲಲು ಟಿ2 ಅರ್ಹತೆ ಪಡೆದಿದೆ. ಇದು ಯುನೆಸ್ಕೋದಿಂದ ಅಂಗೀಕರಿಸಲ್ಪಟ್ಟ ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ವಿನ್ಯಾಸ ಮತ್ತು ವಾಸ್ತುಶಿಲ್ಪ ಪ್ರಶಸ್ತಿಯಾಗಿದೆ. ಈ ಗೌರವಾನ್ವಿತ ಮನ್ನಣೆ ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣ ಬೆಂಗಳೂರು.

ಜಾಗತಿಕ ಮಟ್ಟದಲ್ಲಿ ಅಸಾಧಾರಣ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕವಾಗಿ ಉನ್ನತ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿದೆ. 2015ರಲ್ಲಿ ಸ್ಥಾಪಿಸಲಾದ ಪ್ರಿಕ್ಸ್ ವರ್ಸೈಲ್ಸ್, ಸಾಂಸ್ಕೃತಿಕ ರಾಯಭಾರಿಯಾಗಿದ್ದು ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳನ್ನು ಗುರುತಿಸಿ ಗೌರವಿಸುತ್ತದೆ.

255,661 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್ ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ.  ಟರ್ಮಿನಲ್‌ ೨ ಸಂಪೂರ್ಣವಾಗಿ ಬಿದಿರಿನಲ್ಲಿ ಅಲಂಕೃತಗೊಂಡಿದ್ದು, ಒಳಾಂಗಣಗಳು ಕ್ಲಾಸಿಕ್ ಲುಕ್‌ ಹೊಂದಿವೆ. ಸಂಪೂರ್ಣ ಹಸಿರುಮಯ, ಅರ್ಥ್‌ವಾಲ್‌ ಹಾಗೂ ವಾಟರ್‌ಫಾಲ್ಸ್‌ನಿಂದ ತುಂಬಿರುವ ಟರ್ಮಿನಲ್, ಒಂದು ವಿಶಾಲವಾದ ಒಳಾಂಗಣ ಉದ್ಯಾನವನವನ್ನೇ ಹೊಂದಿದೆ. ಮೇಲ್ಭಾಗದಲ್ಲಿ ಗಂಟೆಯೊಳಗಿರುವ ಸಸಿಗಳು ಸಹ ಟರ್ಮಿನಲ್‌ನ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net