ಗಂಗೊಳ್ಳಿ: ವಿಶೇಷ ಚೇತನ ಮಗು ಜನನ ತಡೆಗಟ್ಟಲು ಸರ್ಕಾರ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ, ಬಿಸಿಯೂಟ ಮೊದಲಾದವುಗಳನ್ನು ನೀಡುತ್ತಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಾಗಬಾರದೆಂಬ ಉದ್ದೇಶದಿಂದ ಸರ್ಕಾರಿ ಸೌಲಭ್ಯ ಒದಗಿಸುತ್ತಿದೆ. ಇದನ್ನು ಪಡೆದುಕೊಳ್ಳಲು ಯುಡಿಐಡಿ ಕಾರ್ಡ್ ಕಡ್ಡಾಯ. ಇವುಗಳ ಮಾಹಿತಿ ಪಡೆದು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ ಹೇಳಿದರು.
ಉಡುಪಿಯ ವಿಕಲಚೇತನರ ಹಾಗೂ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಗ್ರಾಪಂ ಗಂಗೊಳ್ಳಿ ಆಶ್ರಯದಲ್ಲಿ ಗುರುವಾರ ವಿಕಲಚೇತನರ ಸಮನ್ವಯ ಗ್ರಾಮಸಭೆ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನರ ಇಲಾಖೆ ಎಂಆರ್‌ಡಬ್ಲ್ಯು ಮಂಜುನಾಥ ಹೆಬ್ಬಾರ್, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆ ಬಿಆರ್‌ಪಿ ಪ್ರದೀಪ್ ಕುಮಾರ್ ಶೆಟ್ಟಿ, ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಕಾರ್ಯದರ್ಶಿ ಅನುಪ್ ಶೇಟ್, ಗ್ರಾಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಮುಖ್ಯ ಶಿಕ್ಷಕ, ಗ್ರಾಮೀಣ ಪುನರ್ವಸತಿ ಕೇಂದ್ರ ಕಾರ್ಯಕರ್ತ ಹಫೀಸ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.