ಯೋಧನ ಕುಟುಂಬಕ್ಕೆ ಸಂಘಗಳಿಂದ ನೆರವು

help
Published on

ಕೊಕ್ಕರ್ಣೆ: ಇತ್ತೀಚೆಗೆ ಮಿಲಿಟರಿ ರಕ್ಷಣಾ ಕಾರ್ಯಪಡೆ ಸೇನಾವಾಹನ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರದ ಅನೂಪ್ ಪೂಜಾರಿ ಕುಟುಂಬಕ್ಕೆ ಕೊಕ್ಕರ್ಣೆ ರೋಟರಿ ಕ್ಲಬ್ ಹಾಗೂ ನಾಲ್ಕೂರು ಅಮೂಲ್ಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ವತಿಯಿಂದ ಸಹಾಯಧನ ನೀಡಲಾಯಿತು. ಕೊಕ್ಕರ್ಣೆ ರೋಟರಿ ಕ್ಲಬ್ ಅಧ್ಯಕ್ಷ ಕಾಶೀನಾಥ ಶೆಣೈ, ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ, ಸದಸ್ಯರು, ಅಮೂಲ್ಯ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಭಕ್ತವತ್ಸಲ ಶೆಟ್ಟಿ, ಅನೂಪ್ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net