ನಟಿಗೆ ರತ್ನ ಖಚಿತ ಟಾಯ್ಲೆಟ್‌ ಸೀಟ್ ಗಿಫ್ಟ್ ನೀಡಿದ ಪತಿ!

Ben Affleck
Published on

ಅಮೆರಿಕಾ: ಅಮೆರಿಕಾದ ಪ್ರಸಿದ್ಧ ನಟಿ, ಗಾಯಕಿ ಹಾಗೂ ನೃತ್ಯಗಾರ್ತಿ ಜೆನ್ನಿಫರ್ ಲೋಪೆಜ್‌ಗೆ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಸುದ್ದಿ ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದೆ.

ನಟಿ ತಮ್ಮ ನಟನೆ ಮಾತ್ರವಲ್ಲದೇ ತಮ್ಮ ವಿಭಿನ್ನ ಫ್ಯಾಷನ್ ಕಲೆಕ್ಷನ್‌ನಿಂದಾಗಿ ತಮ್ಮ ಅಭಿಮಾನಿಗಳನ್ನು ಆಗಾಗ ಸೆಳೆಯುತ್ತಲೇ ಇರುತ್ತಾರೆ. ಇಂತಹ ನಟಿಗೆ ಈಗ ಅವರ ಪತಿ ಬೆನ್ ಅಫ್ಲೆಕ್ಸ್ ಅವರು ರತ್ನಖಚಿತ ಟಾಯ್ಲೆಟ್ ಸೀಟ್‌ನ್ನು ಗಿಫ್ಟ್ ಆಗಿ ನೀಡಿದ್ದಾರೆ. ಬೆನ್ ಅಫ್ಲೆಕ್ ತಮ್ಮ ಪ್ರೀತಿಯ ಪತ್ನಿಗೆ 88 ಲಕ್ಷ ಮೌಲ್ಯದ ರತ್ನಖಚಿತ ಟಾಯ್ಲೆಟ್ ಸೀಟ್ ಉಡುಗೊರೆಯಾಗಿ ನೀಡಿದ್ದು, ಅಚ್ಚರಿಗೆ ಕಾರಣವಾಗಿದ್ದಾರೆ. ಈ ವೀಡಿಯೋವೊಂದು ಈಗ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಬೆನ್‌ ಅಫ್ಲೆಕ್ಸ್ ಅವರು ತಾನು ತನ್ನ ಪತ್ನಿಗೆ 105,000 ಡಾಲರ್ ಮೊತ್ತದ ಟಾಯ್ಲೆಟ್ ಸೀಟನ್ನು ನೀಡಿದ್ದಾಗಿ ಹೇಳಿದ್ದಾರೆ.

ಕಮೋಡ್ ವಿಶೇಷತೆ?: ಈ ಶೌಚಾಲಯದ ಕಮೋಡ್ ಆಸನವೂ ಕಸ್ಟಮೈಸ್‌ ಆಗಿದ್ದು, ದುಬಾರಿ ಜ್ಯುವೆಲ್ಲರಿಗಳಾದ ಮುತ್ತು ಹವಳ, ನೀಲಮಣಿಗಳು ಹಾಗೂ ಅದಕ್ಕಿಂತ ಹೆಚ್ಚಾಗಿ ವಜ್ರಗಳನ್ನು ಹೊಂದಿದೆ. ಇದೇ ವೇಳೆ ತನ್ನ ಪತ್ನಿ ಜೆನ್ನಿಫರ್ ಸ್ವಚ್ಛತೆಯ ವಿಚಾರದಲ್ಲಿ ಕ್ಲೀನ್‌ನೆಸ್ ಫ್ರೀಕ್ ಆಗಿದ್ದಾಳೆ. ಹೀಗಾಗಿ ಯಾವ ಶೌಚಾಲಯಕ್ಕೂ ಸರಿ ಹೊಂದುವಂತಹ ಕಾಮೋಡ್ ಸೀಟನ್ನು ಆಕೆಗೆ ಗಿಫ್ಟ್ ಆಗಿ ನೀಡಿದ್ದಾಗಿ  ಹೇಳಿದ್ದಾರೆ.

ಜೆನ್ನಿಫರ್ ಲೋಪೆಜ್ ಹಾಗೂ ಬೆನ್ ಅಫ್ಲೆಕ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಈ ದಂಪತಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸುಂದರ ಫೋಟೋಗಳನ್ನು ಹಾಕುವ ಮೂಲಕ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net