ಬೆಳಗಾವಿ: ವೇಶ್ಯಾವಾಟಿಕೆ ಸಂತ್ರಸ್ತೆಯರನ್ನು ಪಾಲಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಪೊಲೀಸರು!

BLG Police
Published on

ಬೆಳಗಾವಿ: ಹೈಟೆಕ್ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ರಕ್ಷಣೆಗೆ ಒಳಗಾಗಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಕಳೆದ ಫೆಬ್ರವರಿ 7 ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ಹೈಟೆಕ್ ವೇಶಾವಾಟಿಕೆ ಮೇಲೆ ಬೆಳಗಾವಿ ಎಪಿಎಂಸಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಿ, ಕೆಲವರನ್ನು ಬಂಧಿಸಲಾಗಿತ್ತು.

ಯುವತಿಯರ ಬಗ್ಗೆ ವಿಚಾರಿಸಿದಾಗ ಓರ್ವ ಯುವತಿ ಉತ್ತರ ಪ್ರದೇಶ ಮೂಲದವಳೆಂದು ತಿಳಿದುಬಂದಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಯುವತಿ ಕಾಣೆಯಾಗಿದ್ದಳು. ಗಾಜಿಯಾಬಾದ್​ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಓರ್ವ ಯುವಕನನ್ನು ಪ್ರೀತಿಸಿ, ಆತನಿಂದ ಮೋಸ ಹೋಗಿದ್ದ ಯುವತಿ, ವಾಪಸ್​ ಮನೆಗೂ ಹೋಗದೇ, ದಿಕ್ಕು ತೋಚದೇ ಇಲ್ಲಿಯವರೆಗೂ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದಳು.

ಫೆ.7ರಂದು ನಡೆದ ದಾಳಿಯಲ್ಲಿ ಯುವತಿಯರನ್ನು ರಕ್ಷಣೆ ಮಾಡಿದ ಎಪಿಎಂಸಿ ಪೊಲೀಸರು ಕುಟುಂಬದ ಸದಸ್ಯರ ವಿಳಾಸ ಪತ್ತೆಹಚ್ಚಿ ಯುವತಿಯರನ್ನು ಸ್ವಂತ ಊರಿಗೆ ಕಳುಹಿಸಿ ಮಾನವೀಯತೆಯ ಮೆರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net