ಗಣಪನ ಆಗಮನಕ್ಕೂ ಮುನ್ನ ಮಾನವ ಸರಪಳಿಯಲ್ಲಿ ಗಣೇಶನ ಪ್ರತಿಮೆ ನಿರ್ಮಿಸಿದ ಕಾಲೇಜು ವಿದ್ಯಾರ್ಥಿಗಳು ! ವಿಡಿಯೋ ವೈರಲ್​| Ganesha Festival

untitled-design-2025-08-25t113837099-68abfdf68157e
Published on

Ganesha Festival : ದೇಶಾದ್ಯಂತ ಗಣೇಶ ಚತುರ್ಥಿಯ ಹಬ್ಬದ ವಾತಾವರಣ ಎಲ್ಲೆಡೆ ಹೆಚ್ಚುತ್ತಿದ್ದಂತೆಯೇ, ಹೃದಯೀಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಗಣೇಶನ ಅದ್ಭುತ ರೂಪವನ್ನು ರಚಿಸುವ ಸಲುವಾಗಿ ಕಾಲೇಜು ವಿದ್ಯಾರ್ಥಿಗಳು ಬೃಹತ್​ ಸರಪಳಿಯನ್ನು ಪ್ರದರ್ಶಿಸಿದ್ದಾರೆ. ಇನ್ನು ವಿದ್ಯಾರ್ಥಿಗಳು ವೈಮಾನಿಕ ದೃಷ್ಟಿಕೋನದಿಂದ, ವಿವಿಧ ಬಣ್ಣದ ಬಟ್ಟೆಗಳನ್ನ ಧರಿಸಿದ್ದು, ಏಕತೆ, ಭಕ್ತಿ ಹಾಗೂ ಸೃಜನಶೀಲತೆಯನ್ನು ಸಂಕೇತಿಸುವ ಆಕೃತಿಯನ್ನು ರೂಪಿಸಿದ್ದಾರೆ.

ಈ ವಿಡಿಯೋವನ್ನು ಕಲಾವಿದ ಕೇಶವ್​ ಆರ್​ ಪೀಟ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳು ತೋರಿಸಿದ ಸಮರ್ಪಣೆ ಹಾಗೂ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ದೃಶ್ಯವನ್ನು ದೈವಿಕ ದೃಶ್ಯ ಎಂದು ಬಣ್ಣಿಸಿದ್ದಾರೆ. ಭಾರತದ ಸಾಂಪ್ರದಾಯಕದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯು ಈ ವರ್ಷ ಆಗಸ್ಟ್ 27 ರಂದು ಪ್ರಾರಂಭವಾಗಲಿದೆ. ಈ ಹಬ್ಬವು ಅಡೆತಡೆಗಳನ್ನು ನಿವಾರಿಸುವ ಹಾಗೂ ಹೊಸ ಆರಂಭಗಳನ್ನು ಗೌರವಿಸುತ್ತದೆ. ದೇಶಾದ್ಯಂತ ಅನೇಕರು ಈ ವಿಗ್ರಹಗಳನ್ನು ಪೂಜಿಸಿ, ಅಲಂಕಾರಗಳನ್ನು ಮಾಡಿ ಭಕ್ತಿಯಿಂದ ಮೈ ಮರೆಯುತ್ತಾರೆ.

ಭಾರತಾದ್ಯಂತ ಕೆಲವು ಸ್ಥಳಗಳಲ್ಲಿ ಗಣೇಶ ಚತುರ್ಥಿಯು ಭವ್ಯವಾದ ಪೆಂಡಾಲ್​ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳೊಂದಿಗೆ ಅದ್ದೂರಿಯಾಗಿ ನಡೆಸುತ್ತಾರೆ. ಇನ್ನು ಪರಿಸರ ಸ್ನೇಹಿ ಆಚರಣೆ ಮಾಡಲು ಸರ್ಕಾರ ಸಾರ್ವಜನಿಕರಲ್ಲಿ ಒತ್ತಾಯ ನಡೆಸಿದೆ. ಇನ್ನು ಸಮುದಾಯಗಳು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡಲು ಮಣ್ಣಿನ ವಿಗ್ರಹಗಳನ್ನು ಬಳಕೆ ಮಾಡಲು ಒತ್ತಾಯಿಸಿದೆ.

ಈ ನವೀನ ಮಾದರಿಯ ವಿಡಿಯೋ ಎಲ್ಲೆಡೆ ವೈರಲ್​ ಆದಂತೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವ ಪೀಳಿಗೆಗಳು ಭಕ್ತಿಯನ್ನು ವ್ಯಕ್ತಪಡಿಸಲು ನವೀನ ಮಾದರಿಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ. ಕಲೆ, ಶಿಸ್ತು ಮತ್ತು ಭಕ್ತಿಯನ್ನು ವಿಲೀನಗೊಳಿಸುವ ಮೂಲಕ ವಿದ್ಯಾರ್ಥಿಗಳ ಏಕತೆ, ಸೃಜನಶೀಲತೆ ಮತ್ತು ಸಂಪ್ರದಾಯದ ಮೇಲಿನ ಗೌರವ ಈ ದೃಶ್ಯವನ್ನು ಪ್ರತಿನಿದಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net