

ಉತ್ತರಪ್ರದೇಶ: ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಯಾವಾಗಲೂ ಅತ್ಯಂತ ಸೃಜನಶೀಲ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದೀಗ ಸಂಚಾರ ನಿಯಮಗಳನ್ನು ( Traffic rules ) ಉಲ್ಲಂಘಿಸುತ್ತಿರುವ ಯುವ ದಂಪತಿಗಳನ್ನು ಗುರಿಯಾಗಿಸಿಕೊಂಡು ಉತ್ತರ ಪ್ರದೇಶ ಪೊಲೀಸರು ಮಾಡಿರುವ ಟ್ವಿಟ್ಟರ್ ಪೋಸ್ಟ್ ಸಾರ್ವಜನಿಕ ಸುರಕ್ಷತಾ ಸಂದೇಶವಾಗಿದ್ದು, ಇದು ವೈರಲ್ ಆಗಿದೆ.
ಯುಪಿ ಪೊಲೀಸರ ಪೋಸ್ಟ್ನ ಶೀರ್ಷಿಕೆ, "ನೋಯ್ಡಾದಲ್ಲಿ ಬೈಕ್ನಲ್ಲಿ ರೋಮಿಯೋ ಮತ್ತು ಜೂಲಿಯೆಟ್, ಈ ಬಾರಿಯ ಕ್ಲೈಮ್ಯಾಕ್ಸ್ ಪ್ರೇಮಗೀತೆಯಲ್ಲ, ಭಾರಿ ಚಲನ್ ಆಗಿತ್ತು ಎಂದು ಬರೆದುಕೊಂಡು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನೋಯ್ಡಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ನಲ್ಲಿ ದಂಪತಿ ರೊಮ್ಯಾನ್ಸ್ ಮಾಡುವುದನ್ನು ಕಾಣಬಹುದು.
ಸಂಚಾರ ಪೊಲೀಸರು ಅವರಿಗೆ 53,500 ರೂ.ಗಳ ಭಾರಿ ದಂಡ ವಿಧಿಸಿದಾಗ ಅವರ 'ಪ್ರಣಯ' ದುಬಾರಿಯಾಯಿತು. ಯುಪಿ ಪೊಲೀಸರು ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸರ ಈ ತಮಾಷೆಯ ಮತ್ತು ಪರಿಣಾಮಕಾರಿ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆಯಿತು. ಸುರಕ್ಷಿತವಾಗಿರಿ, ನಿಯಮಗಳನ್ನು ಅನುಸರಿಸಿ ಮತ್ತು ನಿಮ್ಮ ಸಂಬಂಧವನ್ನು ಉಳಿಸಿ. ಉತ್ತರ ಪ್ರದೇಶ ಪೊಲೀಸರ ಈ ಸಂದೇಶವು ಸಾರ್ವಜನಿಕರ ಹಿತದೃಷ್ಟಿಯಿಂದ. ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.