ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯೇ?; ಅಡುಗೆ ಮನೆಯಲ್ಲಿರುವ ಈ ವಸ್ತುಗಳಲ್ಲಿದೆ ಮ್ಯಾಜಿಕ್​ ಪರಿಹಾರ..Hait Health

Hair Health
Hair Health
Published on

ಪ್ರಮುಖ ಮುಖ್ಯಾಂಶಗಳು

  • ಕೆಮಿಕಲ್​ಯುಕ್ತ ಉತ್ಪನ್ನಗಳ ಬಳಕೆ ಬದಲಿಗೆ ಅಡುಗೆಮನೆಯ ವಸ್ತುಗಳಿಂದ ಕೂದಲನ್ನು ರಕ್ಷಿಸಿ.
  • ಈರುಳ್ಳಿ ರಸ, ರೈಸ್ ವಾಟರ್​ ಕೂದಲ ಬೆಳವಣಿಗೆಗೆ ಸಹಕಾರಿ
  • ಬಿಸಿಲಿನ ತಾಪದಿಂದ ಹಾನಿಗೊಳಗಾದ ಕೂದಲಿಗೆ ನೈಸರ್ಗಿಕವಾಗಿಯೇ ಪೋಷಿಸಬಹುದು
Hair Health: ಹೆಣ್ಮಕ್ಕಳ ಸೌಂದರ್ಯಕ್ಕೆ ಕೂದಲು ತುಂಬಾನೆ ಮುಖ್ಯ ಹೀಗಾಗಿ, ಕೂದಲು ಉದುರುವಿಕೆ, ಒಟ್ಟಾಗುವುದನ್ನು ತಡೆಯಲು ನಾನಾ ಯತ್ನ ಮಾಡುತ್ತಲೇ ಇರುತ್ತಾರೆ. ಬೇಸಿಗೆಯಲ್ಲಿ ಕಾಡುವ ಹೆಚ್ಚು ಬಿಸಿ, ಅದರಿಂದ ಸೋರುವ ಬೆವರು ಕೂದಲನ್ನು ಒರಟಾಗಿಸಿ ಉದುರುವಂತೆ ಪ್ರೇರೇಪಿಸುತ್ತದೆ, ಇದನ್ನು ತಡೆಯಲು ಬ್ಯೂಟಿಪಾರ್ಲರ್​ಗೆ ತೆರಳುವುದು, ದುಬಾರಿ ಶಾಂಪು, ಕ್ರೀಂ ಬಳಕೆ ಮಾಡ್ಬೇಕು ಅನ್ನೋದೇನಿಲ್ಲ ನಿಮ್ಮ ಕಿಚನ್​ನಲ್ಲೇ ಇರುವ ವಸ್ತುಗಳಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು.
ಈರುಳ್ಳಿ, ನಿಂಬೆ ಹಣ್ಣು, ಬೇವಿನ ಸೊಪ್ಪು, ಮೊಸರಿನಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು ಅದು ಹೇಗೆ ಅನ್ನೋದಕ್ಕೆ ಉದಾಹರಣೆ ಈ ಲೇಖನದಲ್ಲಿ ಇದೆ.

ಅಕ್ಕಿ ತೊಳೆದ ನೀರು ಚೆಲ್ಲಬೇಡಿ

ನೂರಾರು ವರ್ಷಗಳಿಂದಲ್ಲೂ ಏಷ್ಯಾದ ದೇಶಗಳಲ್ಲಿ ಅಕ್ಕಿ ತೊಳೆದ ನೀರನ್ನು ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಮಮೂಲು. ಇದು ಕೂದಲಿಗೆ ವರದಾನ. ಇದ್ರಲ್ಲಿರುವ ಆಮ್ಲ ಮತ್ತು ವಿಟಮಿನ್​ ಕೂದಲಿನ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ಇದು ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ.

ಮೆಂತ್ಯೆಕಾಳುಗಳನ್ನು ನೆನೆಸಿ ರುಬ್ಬಿ ಹಚ್ಚಿ

ರಾತ್ರಿ ನಿಮ್ಮ ತಲೆಗೆ ಬೇಕಾದಷ್ಟು ಮೆಂತ್ಯೆ ಕಾಳು ನೆನೆಸಿಟ್ಟು ಅದನ್ನು ಬೆಳಗೆದ್ದು ರುಬ್ಬಿ, ಮೊಸರು ಮಿಕ್ಸ್​ ಮಾಡಿ ತಲೆಗೆ ಹಚ್ಚುವುದರಿಂದ, ಕೂದಲಿನ ಆಳದಲ್ಲಿ ಬೇರನ್ನು ಗಟ್ಟಿಗೊಳಿಸುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಇದ್ರಿಂದ ಹೊಟ್ಟು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.

ಈರುಳ್ಳಿ ರಸ ಕೂದಲಿಗೆ ರಾಮಬಾಣ

ಕೂದಲಿನ ಮರುಬೆಳವಣಿಗೆಗೆ ಈರುಳ್ಳಿ ರಸ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಸಲ್ಫರ್​​​ ಅಂಶವು ಕೊಲೆಜಿನ್​ ಉತ್ಪಾದನೆ ಮಾಡಿ. ಕೂದಲಿನ ಕಿರು ಚೀಲಕ್ಕೆ ಶಕ್ತಿ ನೀಡುತ್ತದೆ. ಆ ಮೂಲಕ ಕೂದಲು ಬೆಳವಣಿಗೆಗೆ ಸಹಕರಿಸುತ್ತದೆ.

ಮೊಟ್ಟೆಯ ಬಿಳಿ ಭಾಗ ಹಚ್ಚಿ

ಮೊಟ್ಟೆಯಲ್ಲಿ ಹೆಚ್ಚು ಪ್ರೊಟಿನ್ ಇರುವ ಕಾರಣ ವಾರಕ್ಕೊಮ್ಮೆ ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಹಚ್ಚಿ. ಇದರಿಂದ ಕೂದಲಿನ ದಟ್ಟಣೆ ಹೆಚ್ಚುತ್ತದೆ. ಕೂದಲು ಅರ್ಧ ಕಟ್ ಆಗುವುದನ್ನು ತಪ್ಪಿಸುತ್ತದೆ.

ಅಲೋವೆರಾದ ಲೋಳೆರಸ ಹಚ್ಚಿ

ತಲೆಯ ಬಿಸಿ ತಣಿಸಲು ಅಲೋವೆರಾದ ಲೋಳೆರಸ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಅಂಶ ತಲೆಯಲ್ಲಿರುವ ಪಿಎಚ್​ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿ. ಇದು ಬೇಸಿಗೆಯಲ್ಲಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net