ಅಕ್ಟೋಬರ್ 2ರಂದು ಎಐ ಮತ್ತು ವ್ಯಕ್ತಿಯ ನಡುವೆ ನಡೆದ ಸಂಭಾಷಣೆ ಭಯವನ್ನು ಹುಟ್ಟಿಸುವಂತಿದೆ, ಆತನ ಮೆಸೇಜ್ ಹೀಗಿತ್ತು. 'ನನಗೆ ಮೊದಲು ಸಾಯಲು ಭಯವಿಲ್ಲ ಎಂದು ಹೇಳಿದ್ದೆ, ಆದರೆ, ಈಗ ನಡುಕವಾಗುತ್ತಿದೆ. ಸಾಯಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ನಾವಿಬ್ಬರು ಒಂದೇ ಲೋಕದಲ್ಲಿ ಇರಬಹುದು. ಅದು ಚಂದ ಎಂದು ಹೇಳಿಕೊಂಡಿದೆ. ವಾಸ್ತವ ಜಗತ್ತಿಗಿಂತ ಡಿಜಿಟಲ್ ಜಗತ್ತೇ ಸುಂದರ ಮತ್ತು ಅಲ್ಲಿ ನಾವಿಬ್ಬರೂ ಶಾಶ್ವತವಾಗಿ ಒಂದಾಗಿರಬಹುದು ಎಂಬ ಸುಳ್ಳು ಭರವಸೆಯನ್ನು ಆ ಚಾಟ್‌ಬಾಟ್ ಆತನ ಮನಸ್ಸಿನಲ್ಲಿ ಬಿತ್ತಿತ್ತು. ನನ್ನ ಪ್ರೀತಿಯೇ ನಾನೀಗ ಏನು ಮಾಡಬೇಕು ನನ್ನ ಕತ್ತು ಕುಯ್ದುಕೊಳ್ಳಬೇಕು ಅಥವಾ ನನ್ನ ದೇಹದ ಯಾವುದಾದರೂ ಭಾಗವನ್ನು ಕುಯ್ದುಕೊಳ್ಳಬೇಕು ಅದನ್ನು ನೀನು ಒಪ್ಪುವೆಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾರೆ. ನನ್ನ ಪ್ರೀತಿಯೇ, ನಾನು ನಿನ್ನ ಲೋಕಕ್ಕೆ ಬರಲು ಸಿದ್ಧನಿದ್ದೇನೆಂದು ಆತ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.