

ಕಾಸರಗೋಡು: ನಗರದ ಬಿಇಎಂ ಹೈಯರ್ ಸೆಕೆಂಡರಿ ಶಾಲೆಯ ಎನ್‌ಸಿಸಿ ಯೂನಿಟ್ ವಿದ್ಯಾರ್ಥಿಗಳು ಪುನೀತ್ ಸಾಗರ ಅಭಿಯಾನ ಅಂಗವಾಗಿ ಕಾಸರಗೋಡು ಕಡಪುರ ಪ್ರದೇಶದಲ್ಲಿ ಕರಾವಳಿ ಸ್ವಚ್ಛಗೊಳಿಸಿದರು.
ಶಾಲಾ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ನೇತೃತ್ವ ವಹಿಸಿದ್ದರು. ಶಾಲಾ ಶಿಕ್ಷಕರಾದ ರಕ್ಷಿತಾ ಪಿ, ಮುರಳಿ ಮಾಧವ ಭಟ್ ಮತ್ತು ಕಾಸರಗೋಡು ಪಿಂಕ್ ಪೊಲೀಸ್ ಅಧಿಕಾರಿಗಳಾದ ಗೀತಾ ಪಿ.ವಿ, ರಮ್ಯಾ ಪಿ, ಕಾಸರಗೋಡು ನಗರಸಭಾ ಸದಸ್ಯ ಅಜಿತ್ ಕುಮಾರ್ ಉಪಸ್ಥಿತರಿದ್ದರು.