ಈ ಮೂರು ರಾಶಿಯಲ್ಲಿ ಜನಿಸಿದ ಪುರುಷರು ಪ್ರೀತಿಸಿ ಮೋಸ ಮಾಡುವುದರಲ್ಲಿ ನಿಪುಣರಂತೆ! Zodiac Signs

Zodiac Signs
Published on

Zodiac Signs : ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್​ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ.

ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ರಾಶಿಚಕ್ರ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವ, ಪ್ರೇಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಪ್ರಭಾವ ಬೀರುತ್ತದೆ. ಹೀಗಾಗಿ, ಜ್ಯೋತಿಷ್ಯ ಶಾಸ್ತ್ರ ಪ್ರಮುಖವಾಗಿದೆ.

ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿಯೇ ಮಹಿಳೆಯರು ಮತ್ತು ಪ್ರೀತಿಯ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ಮೋಸ ಮಾಡುವುದರಲ್ಲಿ ಹೆಚ್ಚು ನಿಪುಣರಾಗಿರುತ್ತಾರಂತೆ. ಹಾಗಾದರೆ, ಯಾವ ರಾಶಿಯ ಪುರುಷರು ಪ್ರೀತಿಯ ಹೆಸರಿನಲ್ಲಿ ಮಹಿಳೆಯರಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು ಎಂಬುದನ್ನು ನಾವೀಗ ತಿಳಿಯೋಣ.

ಮೇಷ ರಾಶಿ

Aries

ಮೇಷ ರಾಶಿಯವರು ಸ್ವಭಾವತಃ ಉತ್ಸಾಹಿಗಳು ಮತ್ತು ಸಾಹಸಮಯರು. ಈ ರಾಶಿಯವರು ಯಾವಾಗಲೂ ಜೀವನವನ್ನು ಆನಂದಿಸುವ ಬಯಕೆಯನ್ನು ಹೊಂದಿರುತ್ತಾರೆ. ಆದರೆ, ಯಾವುದೇ ಸಂಬಂಧದಲ್ಲಿ ತೃಪ್ತರಾಗುವುದು ವಿರಳ. ಹೀಗಾಗಿ, ಅದು ಪ್ರಣಯ ಸಂಬಂಧವಾಗಿರಲಿ ಅಥವಾ ದೈಹಿಕ ಅನ್ಯೋನ್ಯತೆಯಾಗಲಿ ಅವರು ಯಾವಾಗಲೂ ಸುಲಭವಾಗಿ ಬೇಸರಗೊಳ್ಳುತ್ತಾರೆ. ತಮ್ಮ ತಪ್ಪುಗಳನ್ನು ಇತರರಿಂದ ಮರೆಮಾಡುವ ಕಲೆಯನ್ನು ಸಹ ಅವರು ತಿಳಿದಿದ್ದಾರೆ.

ಸಿಂಹ ರಾಶಿ

ಸಿಂಹ ರಾಶಿಯ ಪುರುಷರು ಸೂರ್ಯನಿಂದ ಆಳಲ್ಪಡುತ್ತಾರೆ. ಆದ್ದರಿಂದ, ಅವರು ಯಾವಾಗಲೂ ಗಮನದ ಕೇಂದ್ರಬಿಂದುವಾಗಿರಲು ಬಯಸುತ್ತಾರೆ. ಅಂದರೆ, ಜಾಗ ಯಾವುದೇ ಇರಲಿ ಅಲ್ಲಿ ತಾವೇ ರಾಜರಾಗಲು ಬಯಸುತ್ತಾರೆ. ಸ್ವಾಭಾವಿಕವಾಗಿಯೇ ಈ ರಾಶಿಯವರು ಆಕರ್ಷಕ ನೋಟ ಮತ್ತು ಮಹಿಳೆಯರನ್ನು ಆಕರ್ಷಿಸುವ ಕಾಂತೀಯ ನೋಟಗಳನ್ನು ಹೊಂದಿರುತ್ತಾರೆ. ಹೀಗಾಗಿ, ಅನೇಕ ಮಹಿಳೆಯರು ಅವರ ಪ್ರೀತಿಯ ಬಲೆಯಲ್ಲಿ ಬೀಳುವಂತೆ ಮಾಡುತ್ತದೆ ಮತ್ತು ನಂತರ ಅವರನ್ನು ಮೋಸಗೊಳಿಸುತ್ತದೆ.

ತುಲಾ ರಾಶಿ

Libra

ತುಲಾ ರಾಶಿಯಲ್ಲಿ ಜನಿಸಿದ ಪುರುಷರು ಇತರ ರಾಶಿಗಳಲ್ಲಿ ಜನಿಸಿದವರಿಗಿಂತ ಹೆಚ್ಚು ಪ್ರಣಯ ಮತ್ತು ಇಂದ್ರಿಯಗಳಿಗೆ ಗುರಿಯಾಗುತ್ತಾರೆ. ಅವರು ಯಾವಾಗಲೂ ತಮ್ಮ ಸಂಬಂಧಗಳಲ್ಲಿ ಏಕತೆ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಆದರೆ, ರಹಸ್ಯ ಕಾಪಾಡುವುದರಲ್ಲಿ ಎಚ್ಚರಿಕೆ ವಹಿಸುತ್ತಾರೆ. ಯಾವುದಾದರೂ ಸಂಬಂಧ ಹೊಂದಿದ್ದರು ಕೂಡ ಅದನ್ನು ತಮ್ಮ ಸಂಗಾತಿಗೆ ತಿಳಿಯದಂತೆ ಮಾಡುವಷ್ಟು ಎಚ್ಚರಿಕೆ ವಹಿಸುತ್ತಾರೆ. ಅವರ ಪ್ರೇಮ ಜೀವನವು ಸಂತೋಷವಾಗಿರುವವರೆಗೆ ಅವರು ತಮ್ಮ ಸಂಗಾತಿಗೆ ಮೋಸ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಆದರೆ, ಅವರ ಸ್ವಾರ್ಥ ಸ್ವಭಾವವು ಬೇರೆ ಮಹಿಳೆಯರಿಗೆ ಮೋಸ ಮಾಡಲು ಮುಖ್ಯ ಕಾರಣವಾಗಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net