

ಧರ್ಮಶಾಲಾ: ಪಂಜಾಬ್-ಡೆಲ್ಲಿ ನಡುವಿನ ಗುರುವಾರದ ಪಂದ್ಯದ ನಡುವೆ ದಿಢೀರ್ ಬ್ಲ್ಯಾಕ್ಔಟ್ ಘೋಷಣೆಯಾಯಿತು ಮತ್ತು ಪಂದ್ಯ ಮೊಟಕುಗೊಂಡಿತು. ಸುಮಾರು 25 ಸಾವಿರ ಜನರು ಸೇರಿದ್ದ ಈ ಸನ್ನಿವೇಶವನ್ನು ಬಿಸಿಸಿಐ ಯಶಸ್ವಿಯಾಗಿ ಮತ್ತು ಯಾವುದೇ ಗೊಂದಲಗಳಿಲ್ಲದೆ ನಿಭಾಯಿಸಿದ ರೀತಿ ಪ್ರಶಂಸೆಗೆ ಪಾತ್ರವಾಗಿದೆ. ಐಪಿಎಲ್ ಆಯುಕ್ತ ಅರುಣ್ ಧುಮಾಲ್ ಸ್ವತಃ ಮುಂದೆ ನಿಂತು ಈ ಸವಾಲಿನ ಸನ್ನಿವೇಶವನ್ನು ಪರಿಪಕ್ವವಾಗಿ ನಿಭಾಯಿಸಿದ್ದರು.
ಪಾಕಿಸ್ತಾನದ ದಾಳಿ ಭೀತಿ ಇದೆ. ಹೀಗಾಗಿ ಪಂದ್ಯ ರದ್ದುಗೊಳಿಸಲಾಗುತ್ತಿದೆ ಎಂದು ನೇರವಾಗಿ ಹೇಳಿದ್ದರೆ ಪ್ರೇಕ್ಷಕರು ಗಾಬರಿಯಾಗುವ ಮತ್ತು ಕಾಲ್ತುಳಿತಗಳಾಗುವ ಸಾಧ್ಯತೆ ಇತ್ತು. ಹೀಗಾಗಿ ಬಿಸಿಸಿಐ ಒಂದೊಂದಾಗಿಯೇ ಸ್ಟೇಡಿಯಂನ ಫ್ಲಡ್ಲೈಟ್ಗಳನ್ನು ಆ್ ಮಾಡಿತು ಮತ್ತು ಫ್ಲಡ್ಲೈಟ್ನಲ್ಲಿ ತಾಂತ್ರಕ ದೋಷವಿದೆ. ಹೀಗಾಗಿ ಪಂದ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೊದಲಿಗೆ ತಿಳಿಸಿತು. ಇದರಿಂದ ಪ್ರೇಕ್ಷಕರು, ಗಾಬರಿಯಾಗದೆ ಶಾಂತವಾಗಿ ಮೈದಾನದಿಂದ ನಿರ್ಗಮಿಸಲು ಸಾಧ್ಯವಾಯಿತು. ಈ ಮೂಲಕ ಬಿಸಿಸಿಐ ಶೆಲ್ ದಾಳಿ ಭೀತಿಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿತು. ಧರ್ಮಶಾಲಾದಿಂದ 100 ಕಿಲೋಮೀಟರ್ ದೂರದಲ್ಲಿರುವ 2 ಪ್ರಮುಖ ನಗರಗಳಲ್ಲಿ ಏರ್ ರೈಡ್ ಸೈರನ್ ಮೊಳಗಿದ್ದವು. ಧರ್ಮಶಾಲಾದಲ್ಲಿ ಸ್ಥಳಿಯ ಆಡಳಿತದ ಬೆಂಬಲದೊಂದಿಗೆ ಬಿಸಿಸಿಐ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು.
ಗಡಿಬಿಡಿಯಲ್ಲಿ ಆಟಗಾರರ ನಿರ್ಗಮನ
ಪಂದ್ಯ ಮೊಟಕುಗೊಂಡ ಬೆನ್ನಲ್ಲೇ ಪಂಜಾಬ್-ಡೆಲ್ಲಿ ತಂಡಗಳ ಆಟಗಾರರು ಗಡಿಬಿಡಿಯಲ್ಲೇ ಸ್ಟೇಡಿಯಂ ತ್ಯಜಿಸಿ ಹೋಟೆಲ್ ಸೇರಿಕೊಂಡರು. ಉಭಯ ತಂಡಗಳ ಆಟಗಾರರು ಗಡಿಬಿಡಿಯಲ್ಲೇ ಬಸ್ ಏರಿದರು. ಈ ವೇಳೆ ಕೆಲ ಆಟಗಾರರು ಕಾಲಿಗೆ ಪ್ಯಾಡ್ ಧರಿಸಿಯೇ ಹೋಟೆಲ್ಗೆ ತೆರಳಿದರು. ಗಡಿಬಿಡಿಯಲ್ಲಿ ಡೆಲ್ಲಿ ತಂಡದ ಬಸ್ನಲ್ಲಿ ಪಂಜಾಬ್ ಮತ್ತು ಪಂಜಾಬ್ ತಂಡದ ಬಸ್ನಲ್ಲಿ ಡೆಲ್ಲಿ ತಂಡದ ಕೆಲ ಆಟಗಾರರೂ ನಿರ್ಗಮಿಸಿದರು. ಒಟ್ಟಾರೆ ಕೂಡಲೆ ಸ್ಟೇಡಿಯಂ ತೊರೆದು, ಹೋಟೆಲ್ ತಲುಪುವುದು ಉಭಯ ತಂಡಗಳ ಆದ್ಯತೆಯಾಗಿತ್ತು.