ನವದೆಹಲಿ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2023ರ ಆವೃತ್ತಿಯಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ. 2022ರ ಐಪಿಎಲ್‌ನಿಂದ 2,367 ಕೋಟಿ ರೂ. ಆದಾಯಗಳಿಸಿದ್ದ ಬಿಸಿಸಿಐ 2023 ರಲ್ಲಿ 5,120 ಕೋಟಿಗೆ ಪ್ರಗತಿ ಸಾಧಿಸಿದೆ. ಇದು 2022ರ ಆವೃತ್ತಿಗಿಂತ ಶೇ.116 ಹೆಚ್ಚು ಎನ್ನಲಾಗಿದೆ.
2022-23ರ ವಾರ್ಷಿಕ ವರದಿಯ ಪ್ರಕಾರ, ಐಪಿಎಲ್‌ನ ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ ಶೇ.78 ಪ್ರಗತಿ ಸಾಧಿಸಿದ್ದು, 2023ರಲ್ಲಿ ಐಪಿಎಲ್‌ನ ಒಟ್ಟು ಆದಾಯವೂ 11,769 ಕೋಟಿ ರೂ.ಗೆ ಏರಿಕೆ ಕಂಡಂತೆ, ವೆಚ್ಚದಲ್ಲೂ ಶೇ.66 ಹೆಚ್ಚಾಗಿದ್ದು, 6,648 ಕೋಟಿ ರೂ. ತಲುಪಿದೆ. 2023 ರಿಂದ 2027ರವರೆಗಿನ ಮಾಧ್ಯಮ ಹಕ್ಕುಗಳಿಂದದ ಬಿಸಿಸಿಐ ಬೊಕ್ಕಸಕ್ಕೆ 48,900 ಕೋಟಿ ರೂ. ಹರಿದು ಬಂದಿದ್ದು, ಐಪಿಎಲ್ ವ್ಯಾಪಾರ ಮೌಲ್ಯ ಕೂಡ ಕಳೆದ ವರ್ಷಕ್ಕಿಂತ ಶೇ.6.5 ಪ್ರಗತಿ ಸಾಧಿಸಿದೆ ಎಂದು ವರದಿ ತಿಳಿಸಿದೆ.
2023ರ ಹಣಕಾಸು ವರ್ಷದಲ್ಲಿ ಬಿಸಿಸಿಐ ಲಾಭವೂ ಶೇ.38 ಅಂದರೆ 3,727 ಕೋಟಿ ರೂ.ಗೆ ಏರಿತು, ಇದರಿಂದ ಒಟ್ಟು ಆದಾಯದಲ್ಲಿ ಶೇ.50 ಏರಿಕೆಯಾಗಿ 6,558 ಕೋಟಿ ರೂ. ಮತ್ತು ವೆಚ್ಚದಲ್ಲೂ ಶೇ.70 ಏರಿಕೆಯಾಗಿ 2,831 ಕೋಟಿ ರೂ.ಗೆ ಹೆಚ್ಚಳ ಆಗಿದೆ ಎನ್ನಲಾಗಿದೆ. 2023ರ ಡಬ್ಲ್ಯುಪಿಎಲ್‌ನಿಂದ 377 ಕೋಟಿ ರೂ. ಗಳಿಸಿದ ಬಿಸಿಸಿಐ, ಮಾಧ್ಯಮ ಹಕ್ಕು, ಫ್ರಾಂಚೈಸಿ ಶುಲ್ಕ ಹಾಗೂ ಪ್ರಾಯೋಜಕತ್ವದಿಂದ 638 ಕೋಟಿ ರೂ. ಜತೆಗೆ ಇತರೆಯಾಗಿ 296 ಕೋಟಿ ರೂಪಾಯಿ ಪಡೆದುಕೊಂಡಿದೆ. 2023-24ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ 2,205 ಕೋಟಿ ರೂ. ಪಾವತಿಸಿದೆ ಎನ್ನಲಾಗಿದೆ.
ವರದಿಯ ಪ್ರಕಾರ, 2023ರ ಕೊನೆಯಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ತನ್ನ ವಿವಿಧ ಉಳಿತಾಯ, ಚಾಲ್ತಿ ಖಾತೆ ಹಾಗೂ ನಿಗದಿತ ಠೇವಣಿಯಲ್ಲಿ 16,493.2 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದು, ಇದು 2022ರ ಠೇವಣಿಗಿಂತ 10,991.29 ಕೋಟಿ ರೂ. ಹೆಚ್ಚು ಎನಿಸಿದೆ. ಇದರಲ್ಲಿ 2023ರ ಋತುವಿನಲ್ಲಿ 4,670 ಕೋಟಿ ರೂಪಾಯಿಗಳನ್ನು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಪಾವತಿಸಿದೆ.
2023ರಿಂದ 2027 ರವರೆಗಿನ 5 ವರ್ಷಗಳ ಅವಧಿಯ ಮಾಧ್ಯಮ ಹಕ್ಕುಗಳಿಗೆ ಡಿಸ್ನಿ ಸ್ಟಾರ್ 23,575 ಕೋಟಿ ರೂ. ನೀಡಿದರೆ, ವಯಾಕಾಮ್18 ಒಡೆತನದ ಜಿಯೋ ಸಿನಿಮಾ 23,758 ಕೋಟಿ ರೂ. ಬಿಡ್ ಸಲ್ಲಿಸಿ ಡಿಜಿಟಲ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಜತೆಗೆ 2023ರಲ್ಲಿ ಟಾಟಾ ಜತೆಗೆ ಮಾಡಿಕೊಂಡ 2,500 ಕೋಟಿ ರೂ. ಮೊತ್ತದ ಶೀರ್ಷಿಕೆ ಪ್ರಾಯೋಜಕತ್ವ ಹಾಗೂ ಸಹ ಪ್ರಾಯೋಜಕತ್ವ ಒಪ್ಪಂದದಿಂದಾಗಿ ಐಪಿಎಲ್ ಮೌಲ್ಯ ವೃದ್ಧಿಸಿದೆ.
ದೇಶದಲ್ಲೇ ನಾನು ಅತ್ಯುತ್ತಮ ಸ್ಪಿನ್ ಬೌಲರ್! ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳಿ ಎಂದ ಯುವ ಕ್ರಿಕೆಟಿಗ
ಸಿಎಸ್ಕೆ ಅಲ್ಲವೇ ಅಲ್ಲ… ಕೊಹ್ಲಿಯ ಫೇವರಿಟ್ ಎದುರಾಳಿ ತಂಡ ಇದಂತೆ! ವಿರಾಟ್ ಕೊಟ್ರು ಅಚ್ಚರಿ ಉತ್ತರ