ನವದೆಹಲಿ: ಟೀಮ್ ಇಂಡಿಯಾ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಸರಣಿಯನ್ನು ಆಡಲಿದೆ. ಆ ಸರಣಿಗೂ ಮುನ್ನ ತಂಡದ ಅನೇಕ ಆಟಗಾರರು ಸೆ. 5ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಸ್ಟಾರ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಶುಭಮನ್ ಗಿಲ್, ರಿಷಭ್ ಪಂತ್, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರಂತಹ ಎಲ್ಲ ಸ್ಟಾರ್‌ಗಳು ದೇಶೀಯ ಕ್ರಿಕೆಟ್ನಲ್ಲಿ ಆಡಲಿದ್ದಾರೆ. ದುಲೀಪ್ ಟೂರ್ನಿಯಲ್ಲಿ ತೋರಿದ ಪ್ರತಿಭೆಯನ್ನು ಆಧರಿಸಿ ಮುಂಬರುವ ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವುದಾಗಿ ಭಾರತೀಯ ಆಯ್ಕೆಗಾರರು ಈಗಾಗಲೇ ಘೋಷಿಸಿದ್ದಾರೆ.
ಈ ದುಲೀಪ್ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿ ಬಾಂಗ್ಲಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ವಿಶ್ವಾಸವನ್ನು ಎಲ್ಲ ಆಟಗಾರರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಯುವ ಕ್ರಿಕೆಟಿಗ ಸಾಯಿ ಕಿಶೋರ್, ಬಿಸಿಸಿಐ ಆಯ್ಕೆಗಾರರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾನೆ. ನಾನು ಭಾರತದ ಅತ್ಯುತ್ತಮ ಸ್ಪಿನ್ ಬೌಲರ್ಗಳಲ್ಲಿ ಒಬ್ಬನಾಗಿದ್ದು, ರೆಡ್ ಬಾಲ್ ಕ್ರಿಕೆಟ್‌ಗೆ ಸಿದ್ಧನಿದ್ದೇನೆ. ನನ್ನನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಿ ಎಂದಿದ್ದಾನೆ.
ಅಂದಹಾಗೆ ಸಾಯಿ ಕಿಶೋರ್ ತಮಿಳುನಾಡಿನ ಯುವ ಕ್ರಿಕೆಟಿಗ. ಈತ ದೇಶೀಯ ಕ್ರಿಕೆಟ್ ಅಲ್ಲದೆ ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡಿರುವುದು ಗೊತ್ತೇ ಇದೆ. ಸಾಯಿ ಕಿಶೋರ್ ಮುಂಬರುವ ದುಲೀಪ್ ಟ್ರೋಫಿಯಲ್ಲಿ ಟೀಮ್-ಬಿ ಪರ ಆಡಲಿದ್ದಾರೆ. ಕಳೆದ ಐಪಿಎಲ್ನಲ್ಲಿ ಆಡುತ್ತಿದ್ದಾಗ ಗಾಯದ ಕಾರಣದಿಂದ ಪಂದ್ಯಾವಳಿಯ ಮಧ್ಯದಲ್ಲಿ ಹೊರಗುಳಿದಿದ್ದ ಸಾಯಿ ಕಿಶೋರ್, ಗಾಯದಿಂದ ಚೇತರಿಸಿಕೊಂಡರು ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ 2024 ನೊಂದಿಗೆ ಮರುಪ್ರವೇಶ ಮಾಡಿದರು. ನಾನು ದುಲೀಪ್ ಟ್ರೋಫಿಯಲ್ಲಿ ಜಡೇಜಾ ಜತೆ ಆಡಲಿದ್ದೇನೆ. ಅವರು ಪ್ರಸ್ತುತ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಜಡೇಜಾ ಜೊತೆ ಆಡಿದರೆ ಸಾಕಷ್ಟು ಕಲಿಯುವ ಅವಕಾಶ ಸಿಗುತ್ತದೆ ಎಂದಿದ್ದಾರೆ.
ಅಂದಹಾಗೆ ದುಲೀಪ್ ಟ್ರೋಫಿಯಲ್ಲಿ ಸಾಯಿ ಕಿಶೋರ್ ಅವರು ಎಷ್ಟರ ಮಟ್ಟಿಗೆ ಮಿಂಚುತ್ತಾರೆ ಎಂಬುದನ್ನು ಕಾದು ನೋಡಬೇಕು. ಆಯ್ಕೆಗಾರರನ್ನು ಮೆಚ್ಚಿಸಿ ಟೀಮ್ ಇಂಡಿಯಾ ಟೆಸ್ಟ್‌ಗೆ ಎಂಟ್ರಿ ಕೊಡುತ್ತಾರಾ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿಯೂ ಇದೆ. (ಏಜೆನ್ಸೀಸ್)
Sai Kishore said, "I feel I'm one of the best spinners in the country. Put me in a Test match, I am ready. Jadeja is there, I've never played alongside him in red-ball format. So, it will be a good learning experience in terms of what he does". (Express Sports). pic.twitter.com/wFmcRuUTWE
— Mufaddal Vohra (@mufaddal_vohra) August 19, 2024
ಟ್ರಾಫಿಕ್ ಪೊಲೀಸ್ ಆದ ಆಟೋ ಚಾಲಕ! ಕೋರ್ಟ್ ಕೊಟ್ಟ ವಿಶೇಷ ತೀರ್ಪಿಗೆ ಜನರಿಂದ ಬಹುಪರಾಕ್
ಅಪರೂಪದ ಡೂಮ್ಸ್ಡೇ ಮೀನು ಸಾವು! ಸಮುದ್ರ ದೇವರ ಸಂದೇಶ, ಜಗತ್ತಿಗೆ ಕಾದಿದೆ ಗಂಡಾಂತರ?