BBKS10: ನಿಮ್ಮ ಪ್ರಕಾರ ಈ ವಾರ ಮನೆಯಿಂದ ಎಲಿಮಿನೇಟ್ ಆಗೋರು ಯಾರು? ಕಮೆಂಟ್ ಮಾಡಿ

ವಿಜಯವಾಣಿ - 2023-12-30T103157.728
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಈಗ 12ನೇ ವಾರದ ಅಂತ್ಯಕ್ಕೆ ಬಂದು ನಿಂತಿದ್ದು, ಕಳೆದ ವಾರ ಇಲ್ಲದ ಕಿಚ್ಚನ ಪಂಚಾಯತಿ ಈ ವಾರ ಇರಲಿದೆ. ಸುದೀಪ್ ಉಪಸ್ಥಿತಿ ಇಲ್ಲದೆ ನಡೆದ ಪಂಚಾಯತಿಯಲ್ಲಿ ಅವಿನಾಶ್​ ಶೆಟ್ಟಿ ಮನೆಯಿಂದ ಹೊರಹೋದರು. ಇನ್ನು ಈ ವಾರ ತಮ್ಮ ಮನೆಯವರ ಆಗಮನದಿಂದ ಮತ್ತಷ್ಟು ಉತ್ಸಾಹ ಹೆಚ್ಚಿಸಿಕೊಂಡಿರುವ ಸ್ಪರ್ಧಿಗಳಿಗೆ ಇದೀಗ ಎಲಿಮಿನೇಷನ್​ ಭಯ ತೀವ್ರವಾಗಿ ಕಾಡ ತೊಡಗಿದೆ.

ಈ ವಾರ ಪೂರ್ತಿ ಟಾಸ್ಕ್​ನಿಂದ ದೂರ ಉಳಿದಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್​ ಕೊಟ್ಟಿದ್ದು ಮಾತ್ರ ಕುಟುಂಬದವರ ಮಾತು, ವಿಶೇಷ ಅಪ್ಪುಗೆ. ಪ್ರತಿಯೊಬ್ಬ ಸದಸ್ಯರ ಕುಟುಂಬದವರನ್ನು ಮನೆಯೊಳಗೆ ಕಳುಹಿಸಿದ ಬಿಗ್ ಬಾಸ್​, ತಮ್ಮ ಪ್ರೀತಿ ಪಾತ್ರರನ್ನು ನೋಡುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟರು. ಬಹಳ ಆನಂದದಿಂದ, ಉತ್ಸಾಹಭರಿತವಾಗಿ ಎಲ್ಲರೊಡನೆ ಖುಷಿಯಿಂದ ಇದ್ದ ಮನೆಮಂದಿ, ಇದೀಗ ಮತ್ತೆ ತಮ್ಮ ಮನೆಯವರನ್ನು ಸೇರುವ ಪರಿಸ್ಥಿತಿ ಎದುರಾಗಿದೆ. ಅದು ಇಂದು ನಡೆಯುವ ಎಲಿಮಿನೇಷನ್​ ಪ್ರಕ್ರಿಯೆಯಿಂದ ತಿಳಿಯಲಿದೆ.

ಈ ವಾರ ಮನೆಯಿಂದ ಹೊರ ಹೋಗಲು ವಿನಯ್, ತನಿಷಾ, ಸಂಗೀತಾ, ಸಿರಿ, ಮೈಕಲ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ನಾಮಿನೇಟ್ ಆಗಿರುವ ಸ್ಪರ್ಧಿಗಳು. ಈ ಎಂಟು ಸದಸ್ಯರ ಪೈಕಿ ಯಾರು ಮನೆಯಿಂದ ಔಟ್​ ಆಗಿ ಹೊರ ಹೋಗಲಿದ್ದಾರೆ ಎಂಬುದನ್ನು ಇಂದು ಮತ್ತು ನಾಳಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net