BBKS10: ಫಿನಾಲೆ ಹೊಸ್ತಿಲಲ್ಲಿ ಚೂರಿ! ವಿನಯ್​ ಹೃದಯಕ್ಕೆ ಇರಿದ ಪ್ರತಾಪ್​

ವಿಜಯವಾಣಿ - 2024-01-09T094403.788
Published on

ಬೆಂಗಳೂರು: ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್‌ ಫೈನಲ್‌ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಉಳಿದಿದ್ದು, ಈ ವೇಳೆ ಮನೆಯೊಳಗೆ ಭಾರೀ ಪೈಪೋಟಿ ಶುರುವಾಗಿದೆ. ನಿನ್ನೆ ನಡೆದ ವಾಗ್ವಾದದ ಮಧ್ಯೆ ಇಂದು ಬಿಗ್ ಬಾಸ್​ ಕೊಟ್ಟ ಮತ್ತೊಂದು ಚಟುವಟಿಕೆ ಅದನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂಬುದಕ್ಕೆ ಇಂದಿನ ಟಾಸ್ಕ್​ ಸಾಕ್ಷಿಯಾಗಿದೆ.

ಎಲ್ಲ ಸದಸ್ಯರ ಎದೆಯ ಮೇಲೆ ಹೃದಯಾಕಾರದ ಬೋರ್ಡ್‌ ಅನ್ನು ನೇತುಹಾಕಲಾಗಿದ್ದು, ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಲಾಗಿರುವ ಹೃದಯದ ಬೋರ್ಡ್‌ಗೆ ಚೂರಿ ಹಾಕಬೇಕು ಎಂದು ತಿಳಿಸಲಾಗಿತ್ತು.

ಈ ಚಟುವಟಿಕೆಯಲ್ಲಿ ಕಾರ್ತಿಕ್‌, ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ತನಿಷಾ, ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್‌ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಎಂದಿನಂತೆ ಮುಂದುವರೆದಿದೆ. ಅವರಿಬ್ಬರು ಪರಸ್ಪರ ಜಿದ್ದಿನಿಂದಲೇ ಚೂರಿ ಹಾಕಿದ್ದಾರೆ.

ಒಟ್ಟಾರೆ ಈ ವಾರ ಯಾರೆಲ್ಲಾ ನಾಮಿನೇಟ್ ಆಗಲಿದ್ದು, ಅವರಲ್ಲಿ ಯಾರು ಸೇಫ್? ಯಾರು ಔಟ್​ ಎಂಬುದನ್ನು ತಿಳಿಯಲು ಈ ವಾರಾಂತ್ಯದ ಪಂಚಾಯತಿ ಕಟ್ಟೆಗಾಗಿ ಕಾಯಬೇಕಿದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net