

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಇದೀಗ 15ನೇ ವಾರಕ್ಕೆ ಕಾಲಿಟ್ಟಿದ್ದು, ಫಿನಾಲೆ ಹಂತದ ಸಂಭ್ರಮದಲ್ಲಿರುವ ಸದಸ್ಯರಿಗೆ ಬಿಗ್ ಬಾಸ್ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಎರಡು ಬಾಕ್ಸ್ಗಳೊಳಗೆ ಮನೆಯ ಹಳೆಯ ಸ್ಪರ್ಧಿಗಳಾದ ನೀತು ವನಜಾಕ್ಷಿ ಮತ್ತು ಇಶಾನಿ ಎಂಟ್ರಿ ಎಲ್ಲರಿಗೂ ಆಶ್ಚರ್ಯ ತಂದಿದೆ. ಈ ಮಧ್ಯೆ ಹೊರಗೆ ಹೋಗಿ ಬಂದಮೇಲೆ ಮನೆಯೊಳಗೆ ನೀವು ಹೇಗಿರಬೇಕು ಎಂಬುದನ್ನು ಆಯಾ ಸ್ಪರ್ಧಿಗಳಿಗೆ ಹೇಳುತ್ತಿರುವುದು ವೀಕ್ಷಕರಲ್ಲಿ ತೀವ್ರ ಗೊಂದಲ ಮೂಡಿಸಿದೆ.
ಮನೆಯೊಳಗೆ ಬಂದ ಇಶಾನಿ ಮತ್ತು ನೀತು ಸಂಗೀತಾ, ಕಾರ್ತಿಕ್, ವಿನಯ್, ನಮ್ರತಾ ಸೇರಿದಂತೆ ಎಲ್ಲರ ಬಳಿ ಹೋಗಿ ವೈಯಕ್ತಿಕವಾಗಿ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಆದ್ರೆ, ಸಲಹೆಗಳೆಲ್ಲವೂ ಅವರು ಹೊರಗಿನಿಂದ ನೋಡಿದ ಅಭಿಪ್ರಾಯದ ಮೇಲೆ ನೀಡಿರುವುದು ಸದ್ಯ ಸದಸ್ಯರ ನಡುವೆ ಭಾರೀ ಮನಸ್ತಾಪಕ್ಕೆ ಕಾರಣವಾಗಲಿದೆಯಾ ಎಂಬ ಗೊಂದಲ ಕಾಡುತ್ತಿದೆ.
ಪ್ರತಾಪ್ ಜತೆಗಿನ ಸಂಬಂಧ ಕುರಿತು ಸಂಗೀತಾಗೆ ಎಚ್ಚರಿಕೆ ಕೊಟ್ಟ ಇಶಾನಿ, ಅವನು ಸಿಂಪಂಥಿ ಕಾರ್ಡ್ ಪ್ಲೇ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಇನ್ನು ನಮ್ರತಾಗೆ ನೀನು ಯಾರ ಬಗ್ಗೆಯೂ ಯೋಚನೆ ಮಾಡಬೇಡ, ನಿನ್ನ ಬಗ್ಗೆ ಮಾತ್ರ ಮಾಡು ಎಂದಿದ್ದಾರೆ.
ಇದಾದ ಬಳಿಕ ನಮ್ರತಾ ಮುಂದೆ ಪ್ರತ್ಯಕ್ಷವಾದ ಸ್ನೇಹಿತ್, ಕೈಮುಗಿದು ಹಾಯ್ ಎಂದು ಹೇಳಿದ್ದಾರೆ. ಇದು ಮನೆಮಂದಿಗೆ ಶಾಕ್ ನೀಡಿದ್ದು, ಇವರಿಬ್ಬರ ಮಧ್ಯೆ ಮಾತುಕತೆ ಮುಂದುವರಿಯುವುದಿಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.