ಬಹುನಿರೀಕ್ಷಿತ ಚಿತ್ರಗಳ ಡಿಜಿಟಲ್ ಹಕ್ಕು ಪಡೆದ 'ನೆಟ್​ಫ್ಲಿಕ್ಸ್'​! ಈ ಸಾಲಿನಲ್ಲಿ ಇರುವುದು ಟಾಪ್​ ನಟರ ಸಿನಿಮಾಗಳೇ

ವಿಜಯವಾಣಿ - 2024-01-16T093127.550
Published on

ಆಂಧ್ರಪ್ರದೇಶ: ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸ್ಟಾರ್​ ನಟರ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಆಕರ್ಷಕ ಪೋಸ್ಟರ್​, ಟೀಸರ್​ ಮತ್ತು ಟ್ರೇಲರ್​ಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವು ಚಿತ್ರಗಳು ಈಗಾಗಲೇ ಬಿಡುಗಡೆಗೂ ಮುನ್ನವೇ ಭಾರೀ ಮೊತ್ತಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ ಪಾಲಾಗಿದ್ದು, ಡಿಜಿಟಲ್​ ರಿಲೀಸ್​ ದಿನಾಂಕವನ್ನು ನಿಗದಿಪಡಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ.

ಇದೀಗ ಬಾಲಿವುಡ್​, ಹಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್​ ಸೇರಿದಂತೆ ಇತರೆ ಚಿತ್ರರಂಗದ ಸಿನಿಮಾಗಳನ್ನು ತನ್ನ ಪಾಲು ಮಾಡಿಕೊಳ್ಳುತ್ತಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ OTT ಪ್ಲಾಟ್‌ಫಾರ್ಮ್ ಆದ ನೆಟ್​ಫ್ಲಿಕ್ಸ್​, ಹೆಚ್ಚಾಗಿ ಈ ಬಾರಿ ತೆಲುಗು ನಟರ ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನು ಅಧಿಕೃತವಾಗಿ ಪಡೆದುಕೊಂಡಿದೆ.

ನಟರಾದ ಜೂ. ಎನ್​ಟಿಆರ್​, ನಂದಮೂರಿ ಬಾಲಕೃಷ್ಣ, ಅಲ್ಲು ಅರ್ಜುನ್​, ಪ್ರಭಾಸ್​, ವಿಜಯ ದೇವರಕೊಂಡ ಮುಂತಾದ ಸ್ಟಾರ್​ ನಟರ ಸಿನಿಮಾಗಳು ಈ ಪಟ್ಟಿಗೆ ಸೇರಿವೆ. ಹಾಗಾದ್ರೆ, ಯಾವೆಲ್ಲಾ ಹೀರೋಗಳ ಚಿತ್ರಗಳು ಈ ಸಾಲಿನಲ್ಲಿವೆ ಎಂಬುದರ ವಿವರ ಹೀಗಿದೆ.

1. ದೇವರ: ಭಾಗ 1

2. ಪುಷ್ಪಾ 2:

3. ಸಲಾರ್: ಭಾಗ 1 - ಸೀಜ್​ ಫೈರ್​

4. ಎನ್​ಬಿಕೆ 109

5. ಟಿಲ್ಲು ಸ್ಕ್ವೇರ್​

6. ಗೋದಾವರಿ ಗ್ಯಾಂಗ್ಸ್

7. ಬಡ್ಡಿ

8. ವಿಡಿ 12

9. ಕಾರ್ತಿಕೇಯ 8

10. ಜಿಎ 2

11. ಎಸ್​ವಿಸಿಸಿ 37,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net