BBKS10: ಕಳಪೆ ಪಟ್ಟ ಕೊಟ್ಟ 'ಬಿಗ್​' ಮಂದಿ; ಹೊರಬಿತ್ತು ತೀವ್ರ ಬೇಸರ!

Untitled design - 2023-11-03T161723.925
Published on

ಬೆಂಗಳೂರು: ವಿನಯ್‌ ಗೌಡ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂಬುದು ಒಂದು ರೀತಿ ಎಲ್ಲರಿಗೂ ತಿಳಿದಂತ್ತಿತ್ತು. ಇದರ ಬೆನ್ನಲ್ಲೇ ಈ ವಾರ ಯಾರಿಗೆ ಕಳಪೆ ಪಟ್ಟ ಕೊಡಬೇಕು ಎಂಬುದು ಸದಸ್ಯರ ಮತದಿಂದ ಘೋಷಣೆಯಾಗಿದೆ.

ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ರಕ್ಷಕ್, ತುಕಾಲಿ ಸಂತೋಷ್​, ನಮ್ರತಾ, ಸ್ನೇಹಿತ್‌, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರನ್ನು ಉಲ್ಲೇಖಿಸಿ, ಕಳಪೆ ಪಟ್ಟ ಕೊಡಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ಸಂಗೀತಾ ಹೆಸರು ಸೂಚಿಸಿದ ಸ್ನೇಹಿತ್, ‘ಇಡೀ ಮನೆಯ ವಾತಾವರಣವೇ ಹಾಳಾಗಿದೆ’ ಎಂದು ಹೇಳಿದರು. ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು, ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಇಡೀ ಮನೆ ನನ್ನ ವಿರುದ್ಧ ಇರೋ ಹಾಗಿದೆ ಅನಿಸ್ತಿದೆ’ ಎಂದು ಕ್ಯಾಮರಾ ಮುಂದೆ ಹೇಳಿಕೊಂಡಿದ್ದಾರೆ.

ಅಂತಿಮವಾಗಿ ಜೈಲಿನ ಉಡುಗೆ ತೊಟ್ಟು, ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್‌ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ. ಕಾರ್ತಿಕ್ ಮೌನವಾಗಿ ಇದನ್ನೆಲ್ಲ ನೋಡಿದ್ದು, ಮೌನದ ಹಿಂದೆ ಕೋಪ ಅಡಗಿಸಿಕೊಂಡಿದ್ದಾರೆ. ಸಂಗೀತಾ ನೋವಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

ದಿನದ 24 ಗಂಟೆ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net