More

    ಕ್ಯಾಪ್ಟನ್​ ಆದ ಬೆನ್ನಲ್ಲೇ ಪ್ರತಾಪ್​ ಬೆನ್ನಿಗೆ ಚೂರಿ ಹಾಕಿದ್ರಾ ನಮ್ರತಾ?

    ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಈ ವಾರದ ಟಾಸ್ಕ್​ನಲ್ಲಿ ನಮ್ರತಾ ಗೌಡ ಅತ್ಯುತ್ತಮ ಪ್ರದರ್ಶನದ ಮೂಲಕ ಮನೆಯ ಕ್ಯಾಪ್ಟನ್​ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಮ್ರತಾ ಕ್ಯಾಪ್ಟನ್ ಆಗುವಲ್ಲಿ ಪ್ರತಾಪ್ ಅವರ ಪಾತ್ರವೂ ಇದೆ. ತಮ್ಮ ಪಾಲಿನ ಪಾಯಿಂಟ್ಸ್​ ಶೇರ್ ಮಾಡಿ ನಮ್ರತಾ ಕ್ಯಾಪ್ಟನ್ಸಿ ರೇಸ್​ನಲ್ಲಿ ಉಳಿದುಕೊಳ್ಳುವಂತೆ ಪ್ರತಾಪ್​ ಸಹಾಯ ಮಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ.

    ಇದನ್ನೂ ಓದಿ: ಹಿಜಾಬ್​ ಆದೇಶ ಇನ್ನೂ ವಾಪಸ್​ ಪಡೆದಿಲ್ಲ: ಸಿಎಂ ಸಿದ್ದರಾಮಯ್ಯ

    ಆದರೆ, ಮನೆಯ ಕ್ಯಾಪ್ಟನ್​ ಆಗಿ ದಿನ ಕಳೆಯುವದರೊಳಗೆ ನಮ್ರತಾ ಅವರು ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಪ್ರತಾಪ್ ಹಳ್ಳಿಯವರನ್ನು ಸೆಳೆಯಲು ಅಲ್ಲಿಯವರಂತೆ ಮಾತನಾಡುತ್ತಾರೆ ಅನ್ನೋದು ಕೆಲವರ ವಾದವಾಗಿದೆ. ಈ ವಾದಕ್ಕೆ ನಮ್ರತಾ ಕೂಡ ಧ್ವನಿಗೂಡಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಮ್ರತಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, ಪ್ರತಾಪ್​ ಬೆನ್ನಿಗೆ ನಮ್ರತಾ ಚಾಕು ಹಾಕಿದರು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಟಾಸ್ಕ್​ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ವಾರದ ಕೊನೆಯಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಿರುತ್ತಾರೆ. ಈ ವಾರ ನಟ ಕಿಚ್ಚ ಸುದೀಪ್​ ಅವರ ಅನುಪಸ್ಥಿತಿಯಲ್ಲಿ ನಟಿ ಶೃತಿ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ಪ್ರೋಮೋ ಶನಿವಾರ ಹಾಗೂ ಭಾನುವಾರದ ಎಪಿಸೋಡ್​ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಗರಿಗೆದರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts