ಭಾರತ ವಿರುದ್ಧ ಸರಣಿಗೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಟಿ20, ಏಕದಿನಕ್ಕೆ ಮಾರ್ಕ್ರಮ್​ ನಾಯಕ

africa web
Published on

ಜೊಹಾನ್ಸ್​ರ್ಬಗ್​: ಪ್ರವಾಸಿ ಭಾರತ ತಂಡದ ವಿರುದ್ಧ ಮುಂದಿನ ಭಾನುವಾರದಿಂದ ನಡೆಯಲಿರುವ ಮೂರೂ ಮಾದರಿಯ ಕ್ರಿಕೆಟ್​ ಸರಣಿಗಳಿಗೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ನಾಯಕ ಟೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡಗೆ ಸೀಮಿತ ಓವರ್​ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 ಮತ್ತು ಏಕದಿನ ತಂಡಗಳಿಗೆ ಏಡನ್​ ಮಾರ್ಕ್ರಮ್​ ಹಂಗಾಮಿ ನಾಯಕರಾಗಿ ನೇಮಕಗೊಂಡಿದ್ದಾರೆ. ಟೆಸ್ಟ್​ ಸರಣಿಗೆ ಬವುಮಾ ಮತ್ತು ರಬಾಡ ಮರಳಲಿದ್ದಾರೆ.

ಪ್ರವಾಸದಲ್ಲಿ ಭಾರತ ತಂಡ 3 ಟಿ20, 3 ಏಕದಿನ ಮತ್ತು 2 ಟೆಸ್ಟ್​ ಪಂದ್ಯಗಳನ್ನು ಆಡಲಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಭಾಗವಾಗಿರುವ ಫ್ರೀಡಂ ಟ್ರೋಫಿ ಸರಣಿಯ ಮೊದಲ ಪಂದ್ಯ ಡಿಸೆಂಬರ್​ 26ರಿಂದ ಸೆಂಚುರಿಯನ್​ನಲ್ಲಿ ನಡೆಯಲಿದೆ.

ಏಕದಿನ ವಿಶ್ವಕಪ್​ನಲ್ಲಿ ಆಡಿದ್ದ ವೇಗಿಗಳಾದ ಗೆರಾಲ್ಡ್​ ಕೋಟ್​ಜೀ, ಮಾಕೋರ್ ಜಾನ್ಸೆನ್​ ಮತ್ತು ಲುಂಗಿ ಎನ್​ಗಿಡಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 (ಮೊದಲ 2 ಮಾತ್ರ) ಮತ್ತು ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ವೇಗಿ ನಂಡ್ರೆ ರ್ಬಗರ್​ ಮೂರೂ ತಂಡಗಳಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದರೆ, ಮಧ್ಯಮ ವೇಗಿ ಒಟ್ನಿಯೆಲ್​ ಬಾರ್ಟ್​ಮನ್​ ಟಿ20 ಮತ್ತು ಏಕದಿನ ತಂಡಕ್ಕೆ ಹೊಸಮುಖವಾಗಿದ್ದಾರೆ. ಆಲ್ರೌಂಡರ್​ ಮಿಹ್ಲಾಲಿ ಎಂಪೊಂಗ್ವಾನಾ ಏಕದಿನ ಮತ್ತು ಬ್ಯಾಟರ್​ ಡೇವಿಡ್​ ಬೆಡಿಂಗ್​ಹ್ಯಾಂ ಟೆಸ್ಟ್​ ತಂಡಕ್ಕೆ ಹೊಸಬರಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಮಾರ್ಕ್ರಮ್​ (ನಾಯಕ), ಒಟ್ನಿಯೆಲ್​ ಬಾರ್ಟ್​ಮನ್​, ಮ್ಯಾಥ್ಯೂ ಬ್ರಿಟ್ಜೆ, ನಂಡ್ರೆ ರ್ಬಗರ್​, ಡೋನೊವನ್​ ೆರೆರಾ, ರೀಜಾ ಹೆಂಡ್ರಿಕ್ಸ್​, ಹೆನ್ರಿಕ್​ ಕ್ಲಾಸೆನ್​, ಕೇಶವ್​ ಮಹಾರಾಜ್​, ಡೇವಿಡ್​ ಮಿಲ್ಲರ್​, ಆಂಡಿಲ್​ ಪೆಹ್ಲುಕ್​ವಾಯೊ, ತಬರೇಜ್​ ಶಮ್ಸಿ, ಟ್ರಿಸ್ಟಾನ್​ ಸ್ಟಾಬ್ಸ್​, ಲಿಜಾಡ್​ ವಿಲಿಯಮ್ಸ್​, 1-2ನೇ ಟಿ20ಗೆ ಮಾತ್ರ: ಗೆರಾಲ್ಡ್​ ಕೋಟ್​ಜೀ, ಮಾಕೋರ್ ಜಾನ್ಸೆನ್​, ಲುಂಗಿ ಎನ್​ಗಿಡಿ.

ಏಕದಿನ ತಂಡ: ಮಾರ್ಕ್ರಮ್​ (ನಾಯಕ), ಬಾರ್ಟ್​ಮನ್​, ರ್ಬಗರ್​, ಟೋನಿ ಡಿ ಜೋರ್ಜಿ, ರೀಜಾ ಹೆಂಡ್ರಿಕ್ಸ್​, ಕ್ಲಾಸೆನ್​, ಕೇಶವ್​, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್​ ಮಿಲ್ಲರ್​, ವಿಯಾನ್​ ಮುಲ್ಡರ್​, ಪೆಹ್ಲುಕ್​ವಾಯೊ, ಶಮ್ಸಿ, ವಾನ್​ ಡರ್​ ಡುಸೆನ್​, ಕೈಲ್​ ವೆರ್ರೆನ್ನೆ, ಲಿಜಾಡ್​ ವಿಲಿಯಮ್ಸ್​.

ಟೆಸ್ಟ್​: ಬವುಮಾ (ನಾಯಕ), ಡೇವಿಡ್​ ಬೆಡಿಂಗ್​ಹ್ಯಾಂ, ರ್ಬಗರ್​, ಕೋಟ್​ಜೀ, ಜೋರ್ಜಿ, ಎಲ್ಗರ್​, ಜಾನ್ಸೆನ್​, ಕೇಶವ್​, ಮಾರ್ಕ್ರಮ್​, ಮುಲ್ಡರ್​, ಎನ್​ಗಿಡಿ, ಕೀಗನ್​ ಪೀರ್ಟಸೆನ್​, ರಬಾಡ, ಸ್ಟಾಬ್ಸ್​, ವೆರ್ರೆನ್ನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net