ಸಿನಿಮಾ

ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ?: ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಡಿಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನು ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ. ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ತುಮಕೂರು ಜಿಲ್ಲೆ, ಕ್ಯಾತಸಂದ್ರ ಠಾಣೆಯ ಎಲ್ಲಾ ಸಿಬ್ಬಂದಿ ಕೇಸರಿ ಶರ್ಟ್, ಬಿಳಿ ಪಂಚೆ ತೊಟ್ಟು ಒಟ್ಟಿಗೆ ಸೇರಿ ಫೋಟೋ ತಗೆಗೆಸಿಕೊಂಡಿದ್ದರು. ಈ ಫೋಟೋ ವೈರಲ್​ ಆಗಿತ್ತು.

ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನ ನೀಡದಿರುವುದು ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ: ರಾಹುಲ್ ಗಾಂಧಿ

ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಪೊಲೀಸ್ ಅಧಿಕಾರಿಗಳನ್ನು ತರಾಟೆ ಡಿಸಿಎಂ ತೆಗೆದುಕೊಂಡರು.

ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಡಿ.ಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನ ಹಸರೀಕರಣ ಮಾಡುತ್ತಾರಾ? ಪಾಕಿಸ್ತಾನ ಮಾಡಲು ಹೊರಟಿದ್ದಾರ?. ಕೇಸರಿ ಈ ಧರ್ಮದ ದೇಶದ ಸಂಕೇತವಾಗಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ? ಎಂದು ಕಾಂಗ್ರೆಸ್​​ಗೆ ಪ್ರಶ್ನೆ ಮಾಡಿದ್ದಾರೆ.

ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ. 2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿಕೆ ಶಿವಕುಮಾರ್​ಗಳು ಬಂದ್ರು ಏನು ಆಗೋದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

 ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾದ ಅದೊಂದು ದೃಶ್ಯದ ಬಗ್ಗೆ ಅಜ್ಜಿಯ ಪ್ರತಿಕ್ರಿಯೆಗೆ ಹೆದರುತ್ತಿದ್ದೆ: ಅದಾ ಶರ್ಮಾ

ಡಿಕೆಶಿ ಜೈಲಿಗೆ ಮೇಕೆದಾಟು ಹೋರಾಟ ಮಾಡಿ ಹೋಗಿದ್ರಾ? ಕಾಂಗ್ರೆಸ್​​ನವರು ಏನು ಬಹಳ ಸಾಚಾ ಇದ್ದಾರ? ಇದೀಗ ಪೊಲೀಸ್ ಠಾಣೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ. ಕಾಂಗ್ರೆಸ್ ಬಂದ ಮೇಲೆ ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತವೆ. ಪಾಕಿಸ್ತಾನ ಜಂಡಗಳು ಹಾರಾಡುತ್ತಿವೆ ಎಂದು ಕಾಂಗ್ರೆಸ್​​ ವಿರುದ್ಧವಾಗಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮುಗಿದು ಹೋಗಿಲ್ಲ ನಾವು ಹೋರಾಟ ಮಾಡುತ್ತೇವೆ. 66 ಜನ ನಾವು ವಿರೋಧ ಪಕ್ಷದಲ್ಲಿದ್ದೇವೆ. ಐದು ವರ್ಷ ಅವರು ಏನ್ಮಾಡಿದ್ರು ನಡೆಯುತ್ತೆ ಅನ್ನೋದಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು 135 ಅಲ್ಲ 200 ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಯಿತು ಎನ್ನುವುದು ಗೊತ್ತಲ್ವ. ಇವರ ದುರಹಂಕಾರ ಭ್ರಷ್ಟಾಚಾರ, ಗೂಂಡಾಗಿರಿ ಲೋಕಸಭೆವರೆಗೂ ಗ್ಯಾರಂಟಿ ಕಾರ್ಡ್ ಇರುತ್ತೆ ನಂತರ ವಾರಂಟಿ ಮುಗಿಯುತ್ತದೆ ಎಂದು ಸವಾಲು ಹಾಕಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾ ನೋಡುವಂತೆ ನೋಟಿಸ್ ನೀಡಿದ ಪ್ರಿನ್ಸಿಪಾಲ್!

Latest Posts

ಲೈಫ್‌ಸ್ಟೈಲ್