ಅಸ್ವಸ್ಥಗೊಂಡಿದ್ದ ಬಾಣಂತಿ ಸಾವು

Died 9 March 20
Published on

ಕಾರ್ಕಳ: ಇರ್ವತ್ತೂರು ಗ್ರಾಮದಲ್ಲಿ ಅಸ್ವಸ್ಥಗೊಂಡು ಬಾಣಂತಿ ಮೃತಪಟ್ಟಿದ್ದಾರೆ. ಇರ್ವತ್ತೂರು ಗ್ರಾಮದ ಜಂಗರಬೆಟ್ಟು ನಿವಾಸಿ ಸಂಪ್ರೀತಾ(34) ಮೃತ ಮಹಿಳೆ. ಅವರು ಮೇ 30ರಂದು ತಮ್ಮ 2ನೇ ಮಗುವಿಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು, ಬಳಿಕ ಮಗುವಿನ ಜತೆಯಲ್ಲಿ ತವರು ಮನೆಯಾದ ಇರ್ವತ್ತೂರು ಗ್ರಾಮದ ಜಂಗರಬೆಟ್ಟುವಿನಲ್ಲಿದ್ದು, ಜೂನ್ 5ರಂದು ಸಂಜೆ ಮನೆಯಲ್ಲಿದ್ದಾಗ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ವಾಂತಿ ಮಾಡಿ ಪ್ರಜ್ಞಾಹೀನಗೊಂಡಿದ್ದು, ಅವರನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net